ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಧರ್ಮ,ಸಂವಿಧಾನ ಉಳಿಸಿ ಅಭಿಯಾನ

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಧರ್ಮ ಮತ್ತು ಸಂವಿಧಾನ ಉಳಿಸಿ ಎಂಬ ಅಭಿಯಾನ ಆಯೋಜಿಸುವುದಾಗಿ ಘೋಷಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಹೈದರಾಬಾದ್: ಯೋಗ, ಸೂರ್ಯನಮಸ್ಕಾರ, ವಂದೇ ಮಾತರಂ ಮೂಲಕ ದೇಶದ ಮೇಲೆ ನಿರ್ದಿಷ್ಟ ಧರ್ಮದ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂದು ಆರೋಪಿಸಿರುವ  ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಧರ್ಮ ಮತ್ತು ಸಂವಿಧಾನ ಉಳಿಸಿ ಎಂಬ ಅಭಿಯಾನ ಆಯೋಜಿಸುವುದಾಗಿ ಘೋಷಿಸಿದೆ.

ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಇತರ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದೆ. ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಮಾತನಾಡಿದ ಮೌಲಾನಾ ಸಜ್ಜದ್ ನವೋಮನಿ, ಅಭಿಯಾನದ ಭಾಗವಾಗಿ ಸಾರ್ವಜನಿಕ ಸಭೆ, ವಿಚಾರಗೋಷ್ಠಿಗಳು ಮತ್ತು ವಿಚಾರ ಸಂಕಿರಣ ನಡೆಯಲಿದೆ ಎಂದು ಹೇಳಿದ್ದಾರೆ.

"ಮುಸ್ಲಿಂ ಸಮುದಾಯದ ನಂಬಿಕೆಗಳಿಗೆ ಅಪಾಯ ಎದುರಾಗಿದೆ. ವಂದೇ ಮಾತರಂ ಸೂರ್ಯನಮಸ್ಕಾರ, ಯೋಗದ ಮೂಲಕ ಜಾತ್ಯಾತೀತ ಭಾರತದ ಮೇಲೆ ನಿರ್ದಿಷ್ಟ ಧರ್ಮವನ್ನು ಹೇರುವ ಯತ್ನ ನಡೆಯುತ್ತಿದೆ. ಮುಸ್ಲಿಂ ಸಮುದಾಯದವರು ಅವರ ನಂಬಿಕೆಗಳ ಬಗ್ಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ಇತ್ತೀಚಿನ ಬೆಳವಣಿಗೆಗಳಿಂದ ಮುಸ್ಲಿಂ ಸಮುದಾಯ ಆತಂಕಕ್ಕೊಳಗಾಗಿದೆ" ಎಂದು ಮೌಲಾನಾ ಸಜ್ಜದ್ ಹೇಳಿದ್ದಾರೆ.

ಕೆಲವು ಕಾನೂನುಗಳಲ್ಲಿ ಬದಲಾವಣೆ ಮಾಡಲು ಯತ್ನಿಸಲಾಗುತ್ತಿದ್ದು ಇದರಿಂದಾಗಿ ಮುಸ್ಲಿಮರ ವಯಕ್ತಿಕ ಕಾನೂನುಗಳಿಗೆ ಧಕ್ಕೆ ಉಂಟಾಗಲಿದೆ ಎಂದು ಸಜ್ಜದ್ ಆರೋಪಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿರುವವರ ಬೆಂಬಲದಿಂದ ಕೋಮುವಾದ ಮತ್ತಷ್ಟು ಬಲಗೊಳ್ಳುತ್ತಿದೆ. ಇದರಿಂದಾಗಿ ಅಭಿವೃದ್ಧಿಗೆ ಅಡ್ಡಿ ಉಂಟಾಗುತ್ತಿದೆ ಎಂದು ಸಜ್ಜದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com