
ನವದೆಹಲಿ: ಪಾಕಿಸ್ತಾನದಿಂದ ದೇಶದೊಳಕ್ಕೆ ನುಸುಳಿ ಬರುತ್ತಿರುವ ಉಗ್ರರು ಮಾನವ ರಹಿತ ಡ್ರೋನ್ ಗಳನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ಯತ್ನಿಸುತ್ತಿವೆ ಎಂದು ಶನಿವಾರ ವರದಿ ಮಾಡಲಾಗಿದೆ.
ಉಗ್ರರ ಈ ಡ್ರೋನ್ ದಾಳಿಯನ್ನು ತಡೆಯಲು ಕೇಂದ್ರ ಸರ್ಕಾರ ಡ್ರೋನ್ ಹಾರಾಟಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.
ಯುಎವಿ/ಯುಎಎಸ್, ಏರ್ ಬಲೂನ್ಸ್ ಹಾಗೂ ರಿಮೋಟ್ ಕಂಟ್ರೋಲ್ ಹಾರುವ ಎಲ್ಲಾ ರೀತಿಯ ಸಾಧನಗಳಿಗೂ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಲಷ್ಕರ್-ಇ-ತೊಯಿಬಾ ಸಂಘಟನೆಯ ಉಗ್ರ ಸಯೀದ್ ಝುಬೇದ್ದಿನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್, ಇಂಡಿಯನ್ ಮುಜಾಯೀದ್ದೀನ್ ಸಂಘಟನೆಯ ಸಯೀದ್ ಇಸ್ಮಾಯಿಲ್ ಹಾಗೂ ಕಲಿಸ್ತಾನ ಉಗ್ರ ನಾಯಕ ಜಗ್ತಾರ್ ಸಿಂಗ್ ತಾರಾ ವಿಚಾರಣೆ ವೇಳೆ ಡ್ರೋನ್ ದಾಳಿ ಮಾಹಿತಿ ಹೊರ ಬಿದ್ದಿದೆ ಎನ್ನಲಾಗಿದೆ.
ಈ ಸಂಬಂಧ ಪಾಕಿಸ್ತಾನದಲ್ಲಿ ಈಗಾಗಲೇ ಉಗ್ರರಿಗೆ ವೈಮಾನಿಕ ದಾಳಿಯ ತರಬೇತಿ ನೀಡಲಾಗುತ್ತಿದ್ದು, ಇದಕ್ಕೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಸಹ ನೆರವು ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.
Advertisement