ದೇಶ

ಮೈತ್ರಿ ತೊರೆದ ಮುಲಾಯಂ ವಿರುದ್ಧ ಹೇಳಿಕೆ ನೀಡದಿರಲು ಆರ್ ಜೆಡಿ- ಜೆಡಿಯು ನಿರ್ಧಾರ

ಆರ್.ಜೆ.ಡಿ- ಜೆಡಿಯು ಮೈತ್ರಿ ತೊರೆದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮಾತನಾಡದೇ ಇರಲು ಆರ್.ಜೆ.ಡಿ-ಜೆಡಿಯು ನಾಯಕರು ನಿರ್ಧರಿಸಿದ್ದಾರೆ.

ಮೈತ್ರಿ ತೊರೆದ ಮುಲಾಯಂ ವಿರುದ್ಧ ಹೇಳಿಕೆ ನೀಡದಿರಲು ಆರ್ ಜೆಡಿ- ಜೆಡಿಯು ನಿರ್ಧಾರ
ಲಾಲು ಪ್ರಸಾದ್- ನಿತೀಶ್ ಕುಮಾರ್
Published On :

ಪಾಟ್ನಾ: ಆರ್.ಜೆ.ಡಿ- ಜೆಡಿಯು ಮೈತ್ರಿ ತೊರೆದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮಾತನಾಡದೇ ಇರಲು ಆರ್.ಜೆ.ಡಿ-ಜೆಡಿಯು ನಾಯಕರು ನಿರ್ಧರಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್, ಆರ್.ಜೆ.ಡಿ-ಜೆಡಿಯುನೊಂದಿಗಿನ ಮೈತ್ರಿ ತೊರೆದಿರುವುದು ಬಿಹಾರ ಚುನಾವಣೆಯ ಹಿನ್ನೆಲಯಲ್ಲಿ ಮಹತ್ವ ಪಡೆದುಕೊಂಡಿತ್ತು. ಮೈತ್ರಿ ತೊರೆದ ಮುಲಾಯಂ ಸಿಂಗ್ ಅವರನ್ನು ದೂಷಿಸದೇ ಇರಲು ಲಾಲು ಪ್ರಸಾದ್ ಹಾಗೂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ.  ಈ ವಿಷಯವನ್ನು ಸ್ವತಃ ಲಾಲು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

"ಮುಲಾಯಂ ಸಿಂಗ್ ಅವರ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡದೇ ಇರಲು ಆರ್.ಜೆ.ಡಿ- ಜೆಡಿಯು ನಿರ್ಧರಿಸಿದೆ. ಮುಲಾಯಂ ಸಿಂಗ್ ಸಮಾಜವಾದಿ ಪಕ್ಷದ ಮುಖಂಡ ಮಾತ್ರವಲ್ಲ ಅವರು ನನ್ನ ಸಂಬಂಧಿ,  ಅವರು ಹೆಚ್ಚು ಕೋಪ ಮಾಡಿಕೊಂಡರೆ ಹಳದಿ ಧೋತಿ(ಮದುವೆ
ಸಂದರ್ಭದಲ್ಲಿ ಧರಿಸುವ ವಸ್ತ್ರ) ನೀಡುತ್ತೇವೆ" ಎಂದು ಲಾಲು ಪ್ರಸಾದ್ ಯಾದವ್ ಲಘು ಧಾಟಿಯಲ್ಲಿ ಹೇಳಿದ್ದಾರೆ.      

ಮುಲಾಯಂ ಸಿಂಗ್ ಯಾದವ್ ಮೈತ್ರಿ ತೊರೆದ ಬಗ್ಗೆ ಮಾತನಾಡಿರುವ ನಿತೀಶ್ ಕುಮಾರ್, ಮೈತ್ರಿಕೂಟದಲ್ಲೆ ಉಳಿಸಿಕೊಳ್ಳಲು ಜೆಡಿಯು ಅಧ್ಯಕ್ಷ ಶರದ್ ಯಾದವ್ ಯತ್ನಿಸಿದರು, ಆದರೆ ಯತ್ನಗಳೆಲ್ಲಾ ವಿಫಲವಾಯಿತು. ಪ್ರತಿಯೊಂದು ಪಕ್ಷಕ್ಕೂ ತನ್ನದೇ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿದೆ, ಮುಲಾಯಂ ಸಿಂಗ್ ಯಾದವ್ ಮೈತ್ರಿಯಿಂದ ದೂರವಿರುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.