'ಹವಾಲಾಬಾಝ್' ಕಾಂಗ್ರೆಸ್ ನಿಂದ ಅಭಿವೃದ್ಧಿಗೆ ಅಡ್ಡಿ: ಪ್ರಧಾನಿ ತಿರುಗೇಟು

ಮೊನ್ನೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ತಮ್ಮನ್ನು 'ಹವಾಬಾಜಾ' (ಟೊಳ್ಳು ಭರವಸೆಗಾರ) ಎಂದು ಸೋನಿಯಾ ಗಾಂಧಿಯವರು ಕರೆದುದಕ್ಕೆ ಗುರುವಾರ...
ಭೋಪಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಭೋಪಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Updated on: 

ಭೋಪಾಲ್:  ಮೊನ್ನೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ತಮ್ಮನ್ನು 'ಹವಾಬಾಜಾ' (ಟೊಳ್ಳು ಭರವಸೆಗಾರ) ಎಂದು ಸೋನಿಯಾ ಗಾಂಧಿಯವರು ಕರೆದುದಕ್ಕೆ ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಸಿಕೊಂಡಿದ್ದಾರೆ.

'ಹವಾಬಾಜಾ'ಗಳು ಈ ದೇಶದ ಅಭಿವೃದ್ಧಿಗೆ ತಡೆಯೊಡ್ಡುತ್ತಿವೆ ಎಂದು ಸೋನಿಯಾ ಗಾಂಧಿಯವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಒಂದು ಕಾಲದಲ್ಲಿ ಸಂಸತ್ತಿನಲ್ಲಿ ಬಹುಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ಇಂದು 40ಕ್ಕೆ ಇಳಿದಿದೆ. ಇದಕ್ಕೆ ಆ ಪಕ್ಷದ ಮೇಲೆ ಜನತೆಗೆ ನಂಬಿಕೆ ಹುಸಿಯಾಗಿರುವುದೇ ಕಾರಣ. ಈಗಲಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ನಮ್ಮ ಜೊತೆ ಕೈ ಜೋಡಿಸಿ ದೇಶದ ಅಭಿವೃದ್ಧಿ ಕೆಲಸದಲ್ಲಿ ಒಂದಾಗಬೇಕು ಎಂದು ಹೇಳಿದರು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮೂಲಕ ಎಲ್ಲಾ ಪಕ್ಷಗಳು ಆರ್ಥಿಕ ಸುಧಾರಣೆ ತರಲು ಯತ್ನಿಸುತ್ತಿದ್ದರೆ ಕಾಂಗ್ರೆಸ್ ಪಕ್ಷ ಮಾತ್ರ ಅದಕ್ಕೆ ತಡೆಯನ್ನು ಒಡ್ಡುತ್ತಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ಪಕ್ಷ ಕೂಡ ಸರ್ಕಾರದ ಜತೆ ಅಭಿವೃದ್ಧಿ ಕೆಲಸಗಳಲ್ಲಿ ಕೈ ಜೋಡಿಸುತ್ತದೆ ಎಂದು ಆಶಾವಾದ ಇಟ್ಟುಕೊಂಡಿದ್ದೆವು. ಆದರೆ ನಮಗೆ ನಿರಾಶೆಯಾಗಿದೆ ಎಂದು  ಹೇಳಿದರು.

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ 10ನೇ ವಿಶ್ವ ಹಿಂದಿ ಸಮ್ಮೇಳನ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅದನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸರ್ಕಾರದ ಅನೇಕ ಭವಿಷ್ಯದ ಯೋಜನೆಗಳ ಕುರಿತು, ಈವರೆಗೆ ಕೇಂದ್ರ ಸರ್ಕಾರ ತಂದಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಸಂಪೂರ್ಣವಾಗಿ ಜನರ ಬೆಂಬಲದಿಂದ ಅಧಿಕಾರಕ್ಕೆ ಬಂದ ಎನ್ ಡಿಎ ಜನರ ಆಶ್ವಾಸನೆಗಳನ್ನು ಹಂತಹಂತವಾಗಿ ಈಡೇರಿಸುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com