

ಮುಂಬೈ: ಜೈನರ ಹಬ್ಬ ಪರ್ಯುಶನ್ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿರುವ ಬೆನ್ನಲ್ಲೆ, ರಾಜಸ್ಥಾನ ಸರ್ಕಾರ ಸಹ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಿದೆ.
ವರದಿಗಳ ಪ್ರಕಾರ, ಪರ್ಯುಶನ್ ಪ್ರಯುಕ್ತ ರಾಜಸ್ಥಾನದಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಬುಧವಾರ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 17 ಮತ್ತು 18ರಂದು ಮಾಂಸ ಹಾಗೂ ಮೀನು ಮಾರಾಟ ನಿಷೇಧಿಸಿ ನಿರ್ದೇಶನಾಲಯದ ಸ್ಥಳೀಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 27ರಂದು ದಿಗಂಬರ ಜೈನರು ಆಚರಿಸುವ ಅನಂತ್ ಚತುರ್ದಶಿಯಂದು ಸಹ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಇದಕ್ಕು ಮುನ್ನ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಮುಂಬೈನಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದು, ಇದನ್ನು ಮಿತ್ರ ಪಕ್ಷ ಶಿವಸೇನೆ ಹಾಗೂ ಎಂಎನ್‌ಎಸ್ ತೀವ್ರವಾಗಿ ವಿರೋಧಿಸಿವೆ.