ಮಾಂಸ ನಿಷೇಧವನ್ನು 2 ದಿನಕ್ಕಿಳಿಸಿದ ಬಿಎಂಸಿ

ಸಾರ್ವಜನಿಕರ ಆಕ್ರೋಶಕ್ಕೆ ಕೊನೆಗೂ ಮಂಡಿಯೂರಿರುವ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ), ಸೆ.13 ಮತ್ತು 18ರಂದು ಮಾಂಸ ಮಾರಾಟಕ್ಕೆ ಹೇರಿದ್ದ ನಿಷೇಧವನ್ನು ಶುಕ್ರವಾರ ಹಿಂಪಡೆದಿದೆ.
ಮಾಂಸ ಮಾರಾಟ ನಿಷೇಧ (ಸಾಂದರ್ಭಿಕ ಚಿತ್ರ)
ಮಾಂಸ ಮಾರಾಟ ನಿಷೇಧ (ಸಾಂದರ್ಭಿಕ ಚಿತ್ರ)

ಮುಂಬೈ: ಸಾರ್ವಜನಿಕರ ಆಕ್ರೋಶಕ್ಕೆ ಕೊನೆಗೂ ಮಂಡಿಯೂರಿರುವ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ), ಸೆ.13 ಮತ್ತು 18ರಂದು ಮಾಂಸ ಮಾರಾಟಕ್ಕೆ ಹೇರಿದ್ದ ನಿಷೇಧವನ್ನು ಶುಕ್ರವಾರ  ಹಿಂಪಡೆದಿದೆ.

ಸೆ.17ರಂದು ಮಾತ್ರ ನಿಷೇಧ ಜಾರಿಯಲ್ಲಿರಲಿದೆ. ಇದೇ ವೇಳೆ, ನಿಷೇಧಕ್ಕೆ ಸಂಬಂಧಿಸಿ ಬಿಎಂಸಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್, ``ಮುಂಬೈಗೊಂದು ಪ್ರಗತಿಪರ  ಮುಖವಿದೆ. ಹೀಗಿರುವಾಗ ಇಲ್ಲಿ ಮಾಂಸಕ್ಕೆ ನಿಷೇಧ ಹೇರಿರುವುದು ಪ್ರತಿಗಾಮಿ ಕ್ರಮ. ನಮಗೆ ಜನರ ಭಾವನೆ ಅರ್ಥವಾಗುತ್ತದೆ. ಆದರೆ, ಮಾಂಸ ಖರೀದಿಯು ಸ್ವತಂತ್ರ ಆಯ್ಕೆಯ ವಿಚಾರ.

ಇಷ್ಟು ವರ್ಷ ಪ್ರಾಣಿವಧೆಗೆ ಮಾತ್ರ ನಿಷೇಧವಿತ್ತು, ಮಾರಾಟಕ್ಕಿರಲಿಲ್ಲ. ಈಗ ಏಕಾಏಕಿ ನೀವು ಇಂತಹ ನಿರ್ಧಾರ ಹೇಗೆ ಕೈಗೊಂಡಿರಿ'' ಎಂದು ಪ್ರಶ್ನಿಸಿತು. ಜತೆಗೆ, ಮೀನು ಮೊಟ್ಟೆಗಳು  ಮಾಂಸಾಹಾರಿಯಲ್ಲವೇ? ಅದನ್ನೇಕೆ ನಿಷೇಧಿಸಿಲ್ಲ ಎಂದೂ ಕೇಳಿತು. ಇದೇ ವೇಳೆ, ಛತ್ತೀಸ್‍ಗಡ ಸರ್ಕಾರವೂ 8 ದಿನ ಮಾಂಸಕ್ಕೆ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com