

ನವದೆಹಲಿ: ಭಾರತದ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯೊಂದನ್ನು ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಗುಜರಾತ್ ಗೆ ಮೊದಲ ಸ್ಥಾನ ದೊರಕಿದ್ದು, ರಾಜ್ಯವು 9ನೇ ಸ್ಥಾನವನ್ನು ಪಡೆದುಕೊಂಡಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಉದ್ಯಮಕ್ಕೆ ಇರುವ ಅನುಕೂಲಕರವಾದ ವಾತಾವರಣವನ್ನು ಆಧರಿಸಿ ಉದ್ಯಮ ಸುಧಾರಣೆಗಾಗಿ ವಿಶ್ವಬ್ಯಾಂಕ್ ಉದ್ಯಮ ಸ್ನೇಹಿ ರಾಜ್ಯ ಮೌಲ್ಯಮಾಪನ ಎಂಬ ಪಟ್ಟಿಯನ್ನು ತಯಾರು ಮಾಡಿತ್ತು. ವಿಶ್ವಬ್ಯಾಂಕ್ ತಯಾರು ಮಾಡಿದ ಪಟ್ಟಿಯಲ್ಲಿನ ಟಾಪ್ 10 ಸ್ಥಾನದಲ್ಲಿ ಇದೀಗ ಕರ್ನಾಟಕವೂ ಸಹ ತನ್ನ ಸ್ಥಾನವನ್ನುಗಿಟ್ಟಿಸಿಕೊಂಡಿದ್ದು, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶವೂ ಪಟ್ಟಿಯಲ್ಲಿವೆ.
ಉದ್ಯಮ ಆರಂಭಕ್ಕೆ ಇರುವ ವಾತಾವರಣ, ಜಮೀನು ಮಂಜೂರು, ಕಾರ್ಮಿಕ ಸುಧಾರಣೆ, ಮೂಲಸೌಕರ್ಯ, ತೆರಿಗೆ ಮುಂತಾದ ಎಂಟು ಮಾನದಂಡಗಳನ್ನು ಗಮನದಲ್ಲಿರಿಸಿಕೊಂಡು ವಿಶ್ವಬ್ಯಾಂಕ್ ಈ ವರದಿಯನ್ನು ತಯಾರು ಮಾಡಿದೆ.