ದಲಿತರಿಗೆ ಟಿಟಿಡಿಯಿಂದ ಪೂಜಾ ತರಬೇತಿ

ಜಾತಿ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ತಿರುಪತಿಯ ತಿರುಮಲ ಸಮಿತಿ ದಲಿತರೂ ಸೇರಿದಂತೆ ಬ್ರಾಹ್ಮಣೇತರರಿಗೆ ದೇವಾಲಯದ ಪೂಜಾ ವಿಧಿವಿಧಾನಗಳ ತರಬೇತಿ ನೀಡಲು ಮುಂದಾಗಿದೆ...
ವಿಶ್ವ ವಿಖ್ಯಾತ ತಿರುಪತಿ ತಿರುಮಲ ದೇವಾಲಯ (ಸಂಗ್ರಹ ಚಿತ್ರ)
ವಿಶ್ವ ವಿಖ್ಯಾತ ತಿರುಪತಿ ತಿರುಮಲ ದೇವಾಲಯ (ಸಂಗ್ರಹ ಚಿತ್ರ)

ಹೈದರಾಬಾದ್: ಜಾತಿ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ತಿರುಪತಿಯ ತಿರುಮಲ ಸಮಿತಿ ದಲಿತರೂ ಸೇರಿದಂತೆ ಬ್ರಾಹ್ಮಣೇತರರಿಗೆ ದೇವಾಲಯದ ಪೂಜಾ ವಿಧಿವಿಧಾನಗಳ ತರಬೇತಿ ನೀಡಲು ಮುಂದಾಗಿದೆ.

ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಠಿತ ದೇವಾಲಯವೊಂದರಲ್ಲಿ ದಲಿತರು ಮತ್ತು ಶೂದ್ರರಿಗೆ ಪೂಜಾ ವಿಧಿವಿಧಾನ ಕಲಿಕೆಗೆ ಅಧಿಕೃತ ಅವಕಾಶ ನೀಡಲಾಗಿದ್ದು, ಸುಮಾರು 200 ದಲಿತರು ಮತ್ತು ಶೂದ್ರ ವರ್ಗದವರಿಗೆ ವೇದಶಾಸ್ತ್ರ ಮತ್ತು ಪೂಜಾ ವಿಧಿವಿಧಾನಗಳ ಬಗ್ಗೆ ತರಬೇತಿ ಹಾಗೂ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಸಮಿತಿ ಮುಂದಾಗಿದೆ. ಈ ಹಿಂದೆ ತನ್ನ ವೇದಾಧ್ಯಯನ ಶಾಲೆಗೆ ದಲಿತರಿಗೂ ಪ್ರವೇಶ ನೀಡಿದ್ದ ದೇವಾಲಯ ಸಮಿತಿ, ಇದೀಗ ಈ ನಿರ್ಧಾರ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com