ಭಯೋತ್ಪಾದನೆ ನಿಗ್ರಹ ಸವಾಲು, ಉಗ್ರವಾದದ ವಿರುದ್ಧ ಜಯಿಸುತ್ತೇವೆ: ರಾಜನಾಥ್

ಭಯೋತ್ಪಾದನೆ ಒಂದು ಸವಾಲು ಅದರ ವಿರುದ್ಧ ರಾಷ್ಟ್ರ ಜಯ ಸಾಧಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on: 
ಲಖನೌ: ಭಯೋತ್ಪಾದನೆ ಒಂದು ಸವಾಲು ಅದರ ವಿರುದ್ಧ ರಾಷ್ಟ್ರ ಜಯ ಸಾಧಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಲಖನೌದ ಮನಿಷಿ ಮಂದಿರ ಆಶ್ರಮದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ಭಯೋತ್ಪಾದನೆ ನಿಗ್ರಹಿಸುವುದು ಸವಾಲು ಆದರೆ, ಐಎಸ್ ಉಗ್ರ ಸಂಘಟನೆ ಹರಡುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಿ ರಾಷ್ಟ್ರ ಜಯಿಸುತ್ತದೆ ಎಂದುಸಿಂಗ್ ಹೇಳಿದರು.
ಐಎಸ್ ಉಗ್ರ ಸಂಘಟನೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ತನ್ನ ಬಾಹುಗಳನ್ನು ಚಾಚುತ್ತಿದೆ ಎಂದು ಕೇಳಿದ ಪ್ರಶ್ನೆಯನ್ನು ತಳ್ಳಿಹಾಕಿದ ಅವರು, ಈ ರೀತಿಯ ಏನೂ ಇಲ್ಲ, ಅದರ ಬಗ್ಗೆ ಚಿಂತಿಸಬೇಡಿ ಎಂದರು.
ಭಾರತ ಮಾತುಕತೆಗೆ ಸಿದ್ಧವಿಲ್ಲ ಎಂದು ಪಾಕಿಸ್ತಾನ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಅವರ ಹೇಳಿಕೆಯಲ್ಲಿ ಯಾವುದೇ ಅರ್ಥ ಇಲ್ಲ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com