ಮೋದಿಯವರೇ ನಿಮ್ಮ ಸ್ವಯಂ ಸೇವಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಅಜಂ ಖಾನ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನಿಮ್ಮ ಸ್ವಯಂ ಸೇವಕರನ್ನು ಮೊದಲು ಹತೋಟಿಯಲ್ಲಿಟ್ಟುಕೊಳ್ಳಿ ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ ಗುರುವಾರ ಹೇಳಿದ್ದಾರೆ...
ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ (ಸಂಗ್ರಹ ಚಿತ್ರ)
ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ (ಸಂಗ್ರಹ ಚಿತ್ರ)
Updated on: 

ನೊಯ್ಡಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನಿಮ್ಮ ಸ್ವಯಂ ಸೇವಕರನ್ನು ಮೊದಲು ಹತೋಟಿಯಲ್ಲಿಟ್ಟುಕೊಳ್ಳಿ ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂ ಖಾನ್ ಗುರುವಾರ ಹೇಳಿದ್ದಾರೆ.

ಗೋ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಇಂತಹ ಪ್ರಕರಣದಿಂದಲೇ ನಾವು ತಿಳಿದುಕೊಳ್ಳಬಹುದು ಪ್ರಧಾನಿಯವರು ನಮ್ಮ ದೇಶವನ್ನು ಎಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆಂದು. ಪ್ರಧಾನಮಂತ್ರಿಯವರೇ ರಾಜಕೀಯ ಮತ್ತು ಅಧಿಕಾರ ನಮ್ಮೊಂದಿಗೆ ಕೊನೆಯವರೆಗೂ ಇರುವುದಿಲ್ಲ. ನಾವು ಮಾಡುವ ಕೆಟ್ಟ ಕೆಲಸ ಕೊನೆಯವರೆಗೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

ನಿಮ್ಮ ಮೇಲಿರುವ ಗುಜರಾತ್ ಗಲಭೆ ಕಳಂಕ ಎಂದಿಗೂ ಹೋಗುವಂತಹದ್ದಲ್ಲ. ಪ್ರಪಂಚ ಇರುವವರೆಗೂ ಈ ಘಟನೆಯನ್ನು ಯಾರೂ ಮರೆಯುವುದಿಲ್ಲ. ಈ ರೀತಿಯ ಕೃತ್ಯದಿಂದ ದೇಶವನ್ನು ಎಲ್ಲಿ ಕರೆದುಕೊಂಡಲು ಬಯಸುತ್ತಿದ್ದೀರಿ. ಮೊದಲು ನಿಮ್ಮ ಸ್ವಯಂ ಸೇವಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ಊರಿನಲ್ಲಿ ಹಸುಗಳು ನಾಪತ್ತೆಯಾಗಿದ್ದು, ಈ ಹಸುಗಳನ್ನು ಆ ಊರಿನಲ್ಲಿ ವಾಸವಾಗಿದ್ದ ಮುಸ್ಲಿಂ ಕುಟುಂಬವೊಂದು ಹತ್ಯೆ ಮಾಡಿ ಸೇವನೆ ಮಾಡಿದೆ ಎಂದು ಶಂಕಿಸಿದ ಉತ್ತರ ಪ್ರದೇಶ ದಾದ್ರಿ ಊರಿನಲ್ಲಿದ್ದ ಗುಂಪೊಂದು ಮುಸ್ಲಿಂ ಕುಟುಂಬದ ಮೇಲೆ ದಾಳಿ ಮನೆಯಲ್ಲಿದ್ದ ಮಹಮ್ಮದ್ ಇಕ್ಲಾಕ್ (50) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿತ್ತು. ಅಲ್ಲದೇ ಮಹಮ್ಮದ್ ಇಕ್ಲಾಕ್ ನ ಮಗನನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ದಾಳಿ ಮಾಡಿದ 6 ಜನರನ್ನು ಬಂಧನಕ್ಕೊಳಪಡಿಸಿತ್ತು. ಪ್ರಕರಣ ಸಂಬಂಧ ಹಲವು ವಿವಾದಗಳು ಸೃಷ್ಟಿಯಾಗಿದ್ದವಲ್ಲದೇ, ಊರಿನಲ್ಲಿ ಗಲಭೆಯೆದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com