ಬರ ಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ!

ಮಹಾರಾಷ್ಟ್ರದ ಲಾತೂರ್ ನಲ್ಲಿ ಬರ ಆವರಿಸಿರುವುದರಿಂದ ನೀರಿಗಾಗಿ ಹಾಹಾಕಾರ ಉಂತಾಗಿದ್ದು, ರೈಲ್ವೆ ಇಲಾಖೆ ರೈಲುಗಳ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಮಹಾರಾಷ್ಟ್ರದ ಲಾತೂರ್ ನಲ್ಲಿ ಬರ ಆವರಿಸಿರುವುದರಿಂದ ನೀರಿಗಾಗಿ ಹಾಹಾಕಾರ ಉಂತಾಗಿದ್ದು, ರೈಲ್ವೆ ಇಲಾಖೆ ರೈಲುಗಳ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.
ಇದಕ್ಕಾಗಿ 2 ಸರಕು ಸಾಗಣೆ(ಗೂಡ್ಸ್) ರೈಲುಗಳನ್ನು ಸಿದ್ಧವಾಗಿರಿಸಲಾಗಿದ್ದು, ನೀರು ಪೂರೈಕೆ ಮಾಡುವುದಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಖುದ್ದು ರೈಲ್ವೆ ಸಚಿವ ಸುರೇಶ್ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ವಲಯ, ರೈಲ್ವೆ ಇಲಾಖೆ ಟ್ಯಾಂಕರ್ ಮಾದರಿಯಲ್ಲಿರುವ 50 ಬೋಗಿಗಳನ್ನೊಳಗೊಂಡ 2 ಗೂಡ್ಸ್ ರೈಲುಗಳ ಮೂಲಕ ಲಾತೂರ್ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ.
50 ಬೋಗಿಗಳನ್ನೊಳಗೊಂಡ ಮೊದಲ ಗೂಡ್ಸ್ ರೈಲು, ಏ.8 ರ ಸ್ಟೀಮ್ ಕ್ಲೀನಿಂಗ್ ಪ್ರಕ್ರಿಯೆ ನಂತರ ನೀರು ಪೂರೈಕೆ ಮಾಡಲು ಅಣಿಗೊಳ್ಳಲಿದೆ. 5 ಲಕ್ಷ ಜನರನ್ನೊಳಗೊಂಡ ನಗರಸಭೆಯಾಗಿರುವ ಲಾತೂರ್ ನಗರದಲ್ಲಿ ತೀವ್ರ ಬರ ಉಂಟಾಗಿದ್ದು, ಜಿಲ್ಲಾಡಳಿತ  ನೀರು ತುಂಬಿಸಿಕೊಳ್ಳುವ ಕೇಂದ್ರಗಳ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com