ಮೋದಿ ಸರ್ಕಾರ ವಿದೇಶಾಂಗ ನೀತಿಯನ್ನು ಹೊರಗುತ್ತಿಗೆ ನೀಡಿದರೂ ಅಚ್ಚರಿ ಇಲ್ಲ: ಸಂಜಯ್ ಝಾ

ಭಾರತ-ಪಾಕಿಸ್ತಾನದ ನಡುವಿನ ಮಾತುಕತೆ ಸ್ಥಗಿತಗೊಂಡಿದೆ ಎಂದು ಪಾಕ್ ಹೈ ಕಮಿಷನರ್ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಸಂಜಯ್ ಝಾ
ಸಂಜಯ್ ಝಾ

ನವದೆಹಲಿ: ಭಾರತ-ಪಾಕಿಸ್ತಾನದ ನಡುವಿನ ಮಾತುಕತೆ ಸ್ಥಗಿತಗೊಂಡಿದೆ ಎಂದು ಪಾಕ್ ಹೈ ಕಮಿಷನರ್ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪಾಕಿಸ್ತಾನದ ಬಗೆಗಿನ ಭಾರತ ಸರ್ಕಾರದ ನೀತಿಗಳ ಕಾರಣಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ  ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ದ್ವಿಪಕ್ಷೀಯ ಮಾತುಕತೆ ಸ್ಥಗಿತಗೊಳಿವಷ್ಟು ಧೈರ್ಯವಿದೆ. ಬಿಜೆಪಿ ಹಾಗೂ ಮೋದಿ ಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಟ್ವೀಟ್ ಮಾಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್ ತಂಡ ವಿಶ್ವಕಪ್ ಪಂದ್ಯ ಸೋಲುವುದಕ್ಕೆ ಕಾರಣರಾದ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಗೆ ಹೋಲಿಕೆ ಮಾಡಿರುವ ಸಂಜಯ್ ಝಾ, ಭಾರತದ ವಿದೇಶಾಂಗ ನೀತಿಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆನ್ ಸ್ಟಾಕ್ಸ್ ನಂತೆಯೇ ಆಗಿದ್ದಾರೆ ಎಂದು ಸಂಜಯ್ ಝಾ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ವಿದೇಶಾಂಗ ನೀತಿಯನ್ನು ಹೊರಗುತ್ತಿಗೆ ನೀಡಿದರೂ ಯಾವುದೇ ಅಚ್ಚರಿ ಇಲ್ಲ ಎಂದು ಝಾ ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com