ಚೀನಾಗೆ ಕೃತಜ್ಞತೆ ಸಲ್ಲಿಸಿದ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ!

ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಗೆ ವಿಶ್ವ ಸಂಸ್ಥೆ ಮೂಲಕ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ಅಡ್ಡಿ ಉಂಟು ಮಾಡಿದ್ದ ಚೀನಾಗೆ ಉಗ್ರ ಸಂಘಟನೆ ಧನ್ಯವಾದ ತಿಳಿಸಿದೆ.
ಮೌಲಾನಾ ಮಸೂದ್ ಅಜರ್
ಮೌಲಾನಾ ಮಸೂದ್ ಅಜರ್

ನವದೆಹಲಿ: ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಗೆ ವಿಶ್ವ ಸಂಸ್ಥೆ ಮೂಲಕ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ಅಡ್ಡಿ ಉಂಟು ಮಾಡಿದ್ದ ಚೀನಾಗೆ ಉಗ್ರ ಸಂಘಟನೆ ಧನ್ಯವಾದ ತಿಳಿಸಿದೆ.   
ಉಗ್ರ ಸಂಘಟನೆಯ ಮುಖವಾಣಿ ಅಲ್-ಕಲಾಮ್ ನಲ್ಲಿ ಚೀನಾ ತನ್ನ ಸ್ನೇಹಿತನೆಂದು ಉಗ್ರ ಸಂಘಟನೆ ಬಣ್ಣಿಸಿದೆ. ಮಸೂದ್ ಅಜರ್ ಹೆಸರನ್ನು ಆರ್ಥಿಕ ದಿಗ್ಬಂಧನ ಪಟ್ಟಿಗೆ ಸೇರಿಸುವಂತೆ ಭಾರತ ವಿಶ್ವಸಂಸ್ಥೆಯ 1267 ಸಮಿತಿಗೆ ಮನವಿ ಸಲ್ಲಿಸಿತ್ತು. ಆದರೆ ಈ ಮನವಿಗೆ ಅಡ್ಡಿ ಉಂಟು ಮಾಡಿದ್ದ ಚೀನಾ ಮೌಲಾನಾ ಮಸೂದ್ ಅಜರ್ ನ್ನು ಉಗ್ರ ಎನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. 
ಚೀನಾ ಸಹಾಯಕ್ಕೆ ಮುಖವಾಣಿಯಾ ಮೂಲಕ ಧನ್ಯವಾದ ಹೇಳಿರುವ ಉಗ್ರ ಸಂಘಟನೆ, ಸರ್ವ ಶಕ್ತ ದೇವರು ಹಾಗೂ ಚೀನಾ ಅಜರ್ ನನ್ನು  ಉಳಿಸಿದೆ ಎಂದು ಹೇಳಿದೆ. ಪಾಕಿಸ್ತಾನದ ಕೆಲವೊಂದು ಮಾಧ್ಯಮಗಳು ಹಾಗೂ ಭಾರತ ಅಜರ್ ಗೆ ವಿಶ್ವ ಸಂಸ್ಥೆ ಮೂಲಕ ನಿಷೇಧ ವಿಧಿಸುವುದಕ್ಕೆ ಯತ್ನಿಸಿದ್ದವು. ಆದರೆ ಚೀನಾ ಅಜರ್ ನನ್ನು ಉಳಿಸಿದೆ ಇದನ್ನೇ ದೇವರ ಕೃಪೆ ಎನ್ನುವುದು ಎಂದು ಮುಖವಾಣಿಯಲ್ಲಿ ಉಗ್ರ ಸಂಘಟನೆ ಕೃತಜ್ಞತೆ ಸಲ್ಲಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com