ಗುವಾಹಟಿ: ಉತ್ತರ ಭಾರತದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ ಪರಿಣಾಮ ಅಸ್ಸಾಂ ನಲ್ಲಿ ಇಬ್ಬರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಮ್ಯಾನ್ಮಾರ್ ನಲ್ಲಿ ಪ್ರಬಲ ಭೂಕಂಪ ಅಪ್ಪಳಿಸಿದ ಹಿನ್ನಲೆಯಲ್ಲಿ ಕೊಲ್ಕತಾ, ಗುವಾಹಟಿ, ಪಾಟ್ನಾ, ಭುಬನೇಶ್ವರ್, ದೆಹಲಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭೂ ಕಂಪಿಸಿದೆ. ವಿದ್ಯುತ್ ಪೂರೈಕೆ, ದೂರವಾಣಿ ಸಂಪರ್ಕ ಮತ್ತು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಭೂಕಂಪನದ ಬಗ್ಗೆ ಅಸ್ಸಾಂ ಮತ್ತು ಮಣಿಪುರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಟ್ವಿಟರ್ ಖಾತೆ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.