ಬಿಜೆಪಿಗೆ ಮತಹಾಕಿದ ಪತ್ನಿಗೆ ಸ್ಥಳದಲ್ಲಿಯೇ ವಿಚ್ಛೇದನ ನೀಡಿದ ಪತಿರಾಯ

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ಮತಹಾಕಲು ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ ಪತ್ನಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಸ್ಥಳದಲ್ಲೇ ತಲಾಕ್ ನೀಡಿದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ಮತಹಾಕಲು ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ ಪತ್ನಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಸ್ಥಳದಲ್ಲೇ ತಲಾಕ್ ನೀಡಿದ ಆಘಾತಕಾರಿ ಘಟನೆ ನಡೆದಿದೆ.

ಆಸ್ಸಾಂನ ಸೋನಿತ್‌ಪುರ್ ಜಿಲ್ಲೆಯ ಡೊನಮ್ ಅಡ್ಡಹಾಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮುಖಂಡರು, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ವೋಟು ಮಾಡುವಂತೆ  ಕಟ್ಟು ನಿಟ್ಟಿನ ಆದೇಶ ಜಾರಿಗೊಳಿಸಿದ್ದರು. ಆದರೆ, ಐನುದ್ದೀನ್ ಎಂಬಾತನ ಪತ್ನಿಯಾದ ದಿಲ್ವಾರಾ ಬೇಗಂ , ಗ್ರಾಮ ಪಂಚಾಯಿತಿಯ ಆದೇಶ ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿಯಾದ ಪ್ರಮೋದ್ ಬೋರಾಠಾಕೂರ್‌ಗೆ ಮತ ಹಾಕಿದ್ದಳು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಬಿಜೆಪಿಗೆ ಮತ ಹಾಕಬೇಡಿ ಎನ್ನುವ ಆದೇಶವನ್ನು ಹೊರಡಿಸಿದ್ದರು. ಆದರೆ ಪಂಚಾಯಿತಿಯ ಆದೇಶ ಮೀರಿ ಬಿಜೆಪಿಗೆ ಮತಹಾಕಿದ್ದರಿಂದ ಪತಿ ಆಕೆಗೆ ತಲಾಕ್  ನೀಡಿದ್ದಾನೆ.  

ಪತ್ನಿ ದಿಲ್ವಾರಾ, ಗ್ರಾಮ ಪಂಚಾಯಿತಿಯ ಆದೇಶ ಧಿಕ್ಕರಿಸಿ ಬಿಜೆಪಿಗೆ ಮತಹಾಕಿರುವುದು ಕಂಡು ಆಕ್ರೋಶಗೊಂಡ ಪತಿ ಐನುದ್ದೀನ್, ಸ್ಥಳದಲ್ಲಿಯೇ ಪತ್ನಿಗೆ ತಲಾಕ್ ನೀಡಿರುವುದಾಗಿ ಘೋಷಿಸಿದ್ದಾನೆ ಮೇ 19 ರಂದು . ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com