ಪ್ರಿಯಾಂಕಾ ಅವರಿಗೆ ವಿಶೇಷ ರಕ್ಷಣೆಯಡಿ ವಾಸಕ್ಕೆಂದು ನೀಡಲಾಗಿದ್ದ ಬಂಗಲೆಗೆ ಅಂದು 53,421. ರೂ. ತಿಂಗಳ ಬಾಡಿಗೆ ನಿಗದಿಯಾಗಿತ್ತು. ಆದರೆ ಅಷ್ಟೊಂದು ದೊಡ್ಡ ಮೊತ್ತ ಬಾಡಿಗೆ ನೀಡುವ ಆರ್ಥಿಕ ತಾಕತ್ತು ತನಗಿಲ್ಲ ಎಂದು ಚೌಕಾಶಿ ಮಾಡಿದ ಪ್ರಿಯಾಂಕಾ, ಅಂತಿಮವಾಗಿ ಕೇವಲ 8,888 ರು.ಗಳ ತಿಂಗಳ ಬಾಡಿಗೆಯನ್ನು ಸರ್ಕಾರ ನಿಗದಿಪಡಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು. 2002ರ ಮೇ 7ರಂದು ಪ್ರಿಯಾಂಕಾ ಅವರು ಸರಕಾರಕ್ಕೆ ತನ್ನ ಬಂಗಲೆ ಬಾಡಿಗೆಯನ್ನು ಇಳಿಸುವಂತೆ ಬರೆದಿದ್ದ ಪತ್ರದಿಂದ ಈಗ ಬಹಿರಂಗವಾಗಿದೆ.