ಬಿಸಿಲ ಬೇಗೆಗೆ ಒಂದೇ ದಿನದಲ್ಲಿ 12 ಮಂದಿ ಸಾವು

ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಮುಂದುವರೆದಿದ್ದು, ತೆಲಂಗಾಣದಲ್ಲಿ ಬಿಸಿಲ ಝಳ ತಡೆಯಲಾಗದೇ ಒಂದೇ ದಿನದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ..
ತೆಲಂಗಾಣದಲ್ಲಿ ಬಿಸಿಲ ಝಳ (ಸಂಗ್ರಹ ಚಿತ್ರ)
ತೆಲಂಗಾಣದಲ್ಲಿ ಬಿಸಿಲ ಝಳ (ಸಂಗ್ರಹ ಚಿತ್ರ)

ಹೈದರಾಬಾದ್: ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಮುಂದುವರೆದಿದ್ದು, ತೆಲಂಗಾಣದಲ್ಲಿ ಬಿಸಿಲ ಝಳ ತಡೆಯಲಾಗದೇ ಒಂದೇ ದಿನದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ  ಶನಿವಾರ ನಡೆದಿದೆ.

ತೆಂಲಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದ 12 ಮಂದಿ ವಿವಿಧ ಪ್ರದೇಶಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದವರ ಪೈಕಿ  ಕಲ್ಲು ಕುಟಿಗರು, ನಿತ್ಯ ಕೂಲಿ ಕಾರ್ಮಿಕರು ಮತ್ತು ಆಟೋ ರಿಕ್ಷಾ ಚಾಲಕರು ಸೇರಿದ್ದಾರೆ ಎಂದು ಸ್ಥಳೀಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರೂ 45ರಿಂದ 70 ವರ್ಷದೊಳಗಿನವರಾಗಿದ್ದು,   ನಲ್ಗೊಂಡ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 44.8 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಮುಖವಾಗಿ ನಲ್ಗೊಂಡ ಜಿಲ್ಲೆಯ ವೇಮುಲಪಲ್ಲಿ, ಮಿರ್ಯಾಲಗೂಡ, ದಮರಚೆರ್ಲಾ, ಪೆದ್ದಾದಿಶರ್ಲಪಲ್ಲಿ, ಚಿತ್ಯಾಲಾ, ನಾಂಪಲ್ಲಿ ಮತ್ತು ಕೊಡದ ಮಂಡಲ ಗ್ರಾಮಗಳಲ್ಲಿ ಅತಿ ಹೆಚ್ಚು ಉಷ್ಟಾಂಶ ದಾಖಲಾಗಿದೆ. ಇನ್ನು ಸರ್ಕಾರದ ಅಧಿಕೃತ ಅಂಕಿ ಅಂಶಗಳು ಸಾವನ್ನಪ್ಪಿದವರ ಸಂಖ್ಯೆಯನ್ನು 14 ಎಂದು ಬಿಂಬಿಸಿದರೆ, ಅನಧಿಕೃತ ಅಂಕಿ ಅಂಶಗಳ ಪ್ರಕಾರ ಇದಕ್ಕಿಂತ 10 ಪಟ್ಟು ಅಂದರೆ 109 ಮಂದಿ ಬಿಸಿಲ ಝಳದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೇವಲ ನಲ್ಗೊಂಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಕರೀಂ ನಗರ ಮತ್ತು ಅದಿಲಾಬಾದ್ ನಲ್ಲೂ ಬಿಸಿಲ ಝಳ ಮುಂದುವರೆದಿದ್ದು, ಈ ಜಿಲ್ಲೆಗಳಲ್ಲೂ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದ್ದು,  ನಿಜಾಮಾಬಾದ್, ಖಮ್ಮಂ ಮತ್ತು ಭದ್ರಾಚಲಂ ಜಿಲ್ಲೆಗಳಲ್ಲಿ 45ಕ್ಕೂ ಹೆಚ್ಚು ಡಿಗ್ರಿ ಉಷ್ಟಾಂಶ ದಾಖಲಾಗಿದೆ ಎಂದು ಸ್ಥಳೀಯ ಜಿಲ್ಲಾಡಳಿತ ತಿಳಿಸಿದೆ. ಇನ್ನು ಬಿಸಿಲ ಝಳದಿಂದ ಸಾವನ್ನಪ್ಪುತ್ತಿರುವ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಸರ್ಕಾರ, ಮಧ್ಯಾಹ್ನದ ವೇಳೆ ಅಂದರೆ ಬಿಸಿಲು ಜಾಸ್ತಿ ಇರುವ ವೇಳೆ ಮನೆಯಿಂದ ಹೊರಬರದಂತೆ ಅಥವಾ ನೆರಳಿರುವ ಕಡೆ  ಇರುವಂತೆ ಜನರಿಗೆ ಸಲಹೆ ನೀಡಿದೆ.

2009 ಮತ್ತು 2010ರ ಅವಧಿಯಲ್ಲಿಯೂ ಇಂತಹುದೇ ಬರ ಪರಿಸ್ಥಿತಿ ಆಂಧ್ರ ಪ್ರದೇಶದಲ್ಲಿ ಎದುರಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com