ಪ.ಬಂಗಾಳ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ 5ನೇ ಹಂತದ ಮತದಾನ ಆರಂಭ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ 5ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ವ್ಯಾಪಕ ಬಿಗಿ ಭದ್ರತೆ ನಡುವೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ...
ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನ (ಸಂಗ್ರಹ ಚಿತ್ರ)
ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನ (ಸಂಗ್ರಹ ಚಿತ್ರ)
Updated on

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ 5ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ವ್ಯಾಪಕ ಬಿಗಿ ಭದ್ರತೆ ನಡುವೆ ಮತದಾನ ಪ್ರಕ್ರಿಯೆ  ನಡೆಯುತ್ತಿದೆ.

ಒಟ್ಟು 53 ಸ್ಥಾನಗಳಿಗಾಗಿ ಪಶ್ಚಿಮಬಂಗಾಳದ 24 ಪರಗಣದ ದಕ್ಷಿಣ, ಹೂಗ್ಲಿ ಮತ್ತು ದಕ್ಷಿಣ ಕೋಲ್ಕಾತದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ಪೈಕಿ 24 ಪರಗಣ ದಕ್ಷಿಣದಲ್ಲಿ 31  ವಿಧಾನಸಭಾ ಕ್ಷೇತ್ರಗಳಿದ್ದು, ಹೂಗ್ಲಿಯಲ್ಲಿ 18 ಮತ್ತು ಕೋಲ್ಕತಾ ದಕ್ಷಿಣ ಭಾಗದ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಒಟ್ಟು 53 ಕ್ಷೇತ್ರಗಳಲ್ಲಿ 1.24 ಕೋಟಿ ಮತದಾರರಿದ್ದು, ವಿವಿಧ  ಪಕ್ಷಗಳ 349 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಈ ಪೈಕಿ 43 ಮಹಿಳಾ ಅಭ್ಯರ್ಥಿಗಳು ಕೂಡ ಸೇರಿದ್ದಾರೆ ಎಂದು ಆಯೋಗ ತಿಳಿಸಿದೆ.

ಮತದಾನಕ್ಕಾಗಿ ಒಟ್ಟು 14, 642 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಈ ಪೈಕಿ 1075 ಮಾದರಿ ಮತಗಟ್ಟೆಗಳು ಕೂಡ ಒಳಗೊಂಡಿವೆ. ಇದಲ್ಲದೆ ಪ್ರತ್ಯೇಕವಾಗಿ 390 ಮಹಿಳಾ ಮತಗಟ್ಟೆಗಳನ್ನು  ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮತದಾನಕ್ಕೆ ಹಲವು ಪ್ರದೇಶಗಳಲ್ಲಿ ನಕ್ಸಲ್ ದಾಳಿ ಆತಂಕವಿರುವ ಕಾರಣ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ.  ಭದ್ರತಾ ಪಡೆಯ ಸುಮಾರು 680 ಪೊಲೀಸ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಒಟ್ಟು 22 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ  ತುರ್ತು ಪ್ರಹಾರ ದಳ, ಅಶ್ರುವಾಯುದಳಗಳನ್ನು ಕೂಡ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com