ಮುಂಬೈ-ಗೋವಾ ಹೆದ್ದಾರಿಯಲ್ಲಿ ಸೇತುವೆ ಕುಸಿತ: ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಸುಕಿನ ಜಾವ ಸಂಭವಿಸಿದ ಸೇತುವೆ ಕುಸಿತದಲ್ಲಿ ಸಾವಿತ್ರಿ ನದಿಯಲ್ಲಿ...
ಕುಸಿದು ಬಿದ್ದ ಸಾವಿತ್ರಿ ನದಿಯ ಮಹದ್ ಸೇತುವೆಯನ್ನು ಪರಿಶೀಲಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್. ಇತರ ಸಚಿವರು, ಅಧಿಕಾರಿಗಳು ಹಾಜರಿದ್ದರು.
ಕುಸಿದು ಬಿದ್ದ ಸಾವಿತ್ರಿ ನದಿಯ ಮಹದ್ ಸೇತುವೆಯನ್ನು ಪರಿಶೀಲಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್. ಇತರ ಸಚಿವರು, ಅಧಿಕಾರಿಗಳು ಹಾಜರಿದ್ದರು.
Updated on: 
ಮುಂಬೈ: ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಸುಕಿನ ಜಾವ ಸಂಭವಿಸಿದ ಸೇತುವೆ ಕುಸಿತದಲ್ಲಿ ಸಾವಿತ್ರಿ ನದಿಯಲ್ಲಿ ಕೊಚ್ಚಿ ಹೋದ ಬಸ್ಸಿನ ಚಾಲಕನ ಮತ್ತು ಮಹಿಳೆಯೊಬ್ಬರ ಶವಗಳನ್ನು ಗುರುವಾರ ಬೆಳಗ್ಗೆ ಹೊರತೆಗೆಯಲಾಗಿದ್ದು, ಈ ಮೂಲಕ ಸಾವಿಗೀಡಾದವರ ಸಂಖ್ಯೆ 4ಕ್ಕೇರಿದೆ. ನಿನ್ನೆ ಎರಡು ಮೃತದೇಹಗಳು ಸಿಕ್ಕಿದ್ದವು. 
ರಾಯಘಡ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಕಾಶ್ ಮೆಹ್ತಾ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಎರಡು ಬಸ್ಸುಗಳು ಮತ್ತು 5ರಿಂದ 6 ಖಾಸಗಿ ಬಸ್ಸುಗಳು ಕಣ್ಮರೆಯಾಗಿವೆ. ಪ್ರವಾಹ ತೀವ್ರವಾಗಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋದ ಬಸ್ಸುಗಳಲ್ಲಿ ಒಂದು ಜೈಗಡ್ ನಿಂದ ಮುಂಬೈಗೆ ಮತ್ತು ಇನ್ನೊಂದು ರಜಪುರ್ ನಿಂದ ಬೊರಿವಲಿಗೆ ಪ್ರಯಾಣಿಸುತ್ತಿತ್ತು. 
ಕೇಂದ್ರ ವಿಪತ್ತು ರಕ್ಷಣಾ ಪಡೆ ಪುಣೆಯಿಂದ ನಿನ್ನೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರೀ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com