ಇಂಪಾಲ್ ರಕ್ಷಣಾ ಕಚೇರಿ ಬಳಿ ಸುಧಾರಿತ ಸ್ಫೋಟಕ ವಸ್ತು ಪತ್ತೆ

ಅಸ್ಸಾಂನಲ್ಲಿ ಬಾಂಬ್ ಸ್ಫೋಟಗೊಂಡು 24 ಗಂಟೆಯೊಳಗೆ ಇಂಪಾಲ್ ನ ಹೃದಯ ಭಾಗದಲ್ಲಿರುವ ರಕ್ಷಣಾ ಇಲಾಖೆಯ ಪಿಆರ್ಒ ಕಚೇರಿ ಬಳಿ ಭಾನುವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಂಪಾಲ್: ಅಸ್ಸಾಂನಲ್ಲಿ ಬಾಂಬ್ ಸ್ಫೋಟಗೊಂಡು 24 ಗಂಟೆಯೊಳಗೆ ಇಂಪಾಲ್ ನ ಹೃದಯ ಭಾಗದಲ್ಲಿರುವ ರಕ್ಷಣಾ ಇಲಾಖೆಯ ಪಿಆರ್ಒ ಕಚೇರಿ ಬಳಿ ಭಾನುವಾರ ಬೆಳಗ್ಗೆ ಸುಧಾರಿತ ಸ್ಫೋಟಕ ವಸ್ತು(ಐಇಡಿ) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಇಂದು ಬೆಳಗ್ಗೆ 8 ಗಂಟೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಐಇಡಿಯನ್ನು ಪತ್ತೆ ಹಚ್ಚಿದ್ದು, ಅದು ಬರೋಬ್ಬರಿ 3 ಕೆ.ಜಿ.ತೂಕದ ಐಇಡಿ ಬಾಂಬ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ದಳದ ಸಿಬ್ಬಂದಿ ಬಾಂಬ್ ಅನ್ನು ವಶಕ್ಕೆ ಪಡೆದು ಲಂಫೇಲ್ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com