ದೆಹಲಿಯ ಬೇಕರಿಯಲ್ಲಿ ಓವನ್ ಬ್ಲಾಸ್ಟ್; ಮೂವರ ಸಾವು

ಮೈಕ್ರೋವೇವ್ ಓವೆನ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ಜಗತ್ ಪುರಿ ಪ್ರದೇಶದ ಬೇಕರಿಯಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮೈಕ್ರೋವೇವ್  ಓವೆನ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ಜಗತ್ ಪುರಿ  ಪ್ರದೇಶದ ಬೇಕರಿಯಲ್ಲಿ ಸಂಭವಿಸಿದೆ.

ಮುಂಜಾನೆ 5.20 ಕ್ಕೆ ಸ್ಫೋಟ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಕಚೇರಿಗೆ ಕರೆ ಮಾಡಲಾಯಿತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರು ಮಂದಿಯನ್ನು ರಕ್ಷಿಸಿ ಹೆಗ್ಡೆವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೈನುಲ್, ಸಾಜಿದ್, ರಫಾಕತ್ ಮೃತ ಪಟ್ಟ ಕೆಲಸಗಾರರು. ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com