ಪತ್ನಿಯ ಎಂಎಲ್ ಎ ಕನಸು ನನಸು ಮಾಡಲು ದರೋಡೆಕೋರನಾದ ಪತಿ!

ಎಂಎಲ್ ಎ ಆಗಬೇಕೆಂದು ಕನಸು ಕಾಣುತ್ತಿದ್ದ ಪತ್ನಿಯ ಆಸೆಯನ್ನು ಈಡೇರಿಸಲು ವ್ಯಕ್ತಿಯೊಬ್ಬ ದರೋಡೆ ನಡೆಸಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಚೆನ್ನೈ ನಲ್ಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಎಂಎಲ್ ಎ ಆಗಬೇಕೆಂದು ಕನಸು ಕಾಣುತ್ತಿದ್ದ ಪತ್ನಿಯ ಆಸೆಯನ್ನು ಈಡೇರಿಸಲು ಹಣ ಹೊಂದಿಸಲು ಹೋಗಿ ವ್ಯಕ್ತಿಯೊಬ್ಬ ದರೋಡೆ ನಡೆಸಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಗಣೇಶ್ ಮತ್ತು ವೆಲ್ಲೂರಿನ ಮಲ್ಲಿಕಾ ರನ್ನು ಬೂಂಧಿಸಿರುವ ಪೊಲೀಸರು ಮಲಿಕಾ ಪತ್ನಿ ಗಾಂಧಿರಾಜನ್ ಗಾಗಿ ಶೋಧ ನಡೆಸಿದ್ದಾರೆ.

ಗಣೇಶ್ ಡಿಎಂಡಿಕೆ ವೆಲ್ಲೂರು ಯುವ ಘಟಕದ ಕಾರ್ಯದರ್ಶಿಯಾಗಿದ್ದ. ಅಂಬೂರ್ ಕ್ಷೇತ್ರದ ಎಂಎಲ್ ಎ ಆಗಬೇಕು ಎಂಬ ತನ್ನ ಹೆಂಡತಿಯ ಕನಸನ್ನು ನನಸು ಮಾಡುವುದಕ್ಕೊಸ್ಕರ ತಾನು ದರೋಡೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಜುಲೈ 11 ರ ಮಧ್ಯಹ್ನ ಸುಮಾರು 1.30 ರ ವೇಳೆಗೆ ಎನ್ ಕುಮಾರ ದೇವನ್ ಎಂಬ ನಿವೃತ್ತ ಉದ್ಯೋಗಿ ಮನೆಗೆ ಕಾರ್ಪೋರೇಷನ್ ಅಧಿಕಾರಿಯಂತೆ ಪೋಸ್ ನೀಡಿ ಗಣೇಶ್ ಹೋಗಿದ್ದ. ಕುಮಾರ ದೇವ್ ಅವರ ಪತ್ನಿ ನಿವೃತ್ತ ಶಿಕ್ಷಕಿಯಾಗಿದ್ದಾರೆ.

ಈ ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿದ ಗಣೇಶ್ ನಿಮ್ಮ ಮನೆಯ ಹಿತ್ತಲಿನಿಂದ ನೀರು ನಿಂತಿದೆ. ಹೀಗಾಗಿ ಅದನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾನೆ, ಮೊದಲೇ ಪ್ಲಾನ್ ಮಾಡಿದ್ದಂತೆ ತಾನು ದಂಪತಿ ಜೊತೆ ಹಿತ್ತಲಿಗೆ ತೆರಳಿ, ಇನ್ನುಳಿದ ಇಬ್ಬರನ್ನು ಮನೆಯಲ್ಲಿದ್ದ ಚಿನ್ನಾಭರಣ ದೋಚುವಂತೆ ಸೂಚಿಸಿದ್ದಾನೆ. ಅದರಂತೆ ಆ ಇಬ್ಬರು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ವೇಳೆ ಗಣೇಶ್ ವೃದ್ಧ ದಂಪತಿ ಜೊತೆ ಅವರ ಮನೆಗೆ ಬಂದಿದ್ದಾನೆ. ಮರುದಿನ ಬೆಳಗ್ಗೆ 45 ಸಾವರಿನ್ ಚಿನ್ನ ನಾಪತ್ತೆಯಾಗಿರುವುದು ದಂಪತಿಯ ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ವಿರಗಾಂಬಕ್ಕಮ್  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಶೇಷ ತಂಡ ರಚಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಫೂಟೇಜ್ ಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಇಬ್ಬರು ಮನೆಯೊಳಗೆ ಹೋಗಿ ನಂತರ ಸ್ವಲ್ಪ ಹೊತ್ತಿನ ನಂತರ ಮೂವರು ಒಟ್ಟಿಗೆ ಹೋಗಿದ್ದು ದಾಖಲಾಗಿತ್ತು.

ವೆಲ್ಲೂರಿನಿಂದ ತಮ್ಮ ಸ್ವಗ್ರಾಮಕ್ಕೆ ಮರಳುವಾಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ಹಣ ಮತ್ತು ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com