ಮಧ್ಯಪ್ರದೇಶದಲ್ಲಿ ಪ್ರವಾಹ ಭೀತಿ: ತುರ್ತು ಸಭೆ ಕರೆದ ಸಿಎಂ ಚೌಹಾಣ್

ಭಾರೀ ಮಳೆಯಿಂದಾಗಿ ತತ್ತರಗೊಂಡಿರುವ ಮಧ್ಯಪ್ರದೇಶದಲ್ಲಿ ಇದೀಗ ಪ್ರವಾಹ ಭೀತಿ ಎದುರಾಗಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್...
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಭಾರೀ ಮಳೆಯಿಂದಾಗಿ ತತ್ತರಗೊಂಡಿರುವ ಮಧ್ಯಪ್ರದೇಶದಲ್ಲಿ ಇದೀಗ ಪ್ರವಾಹ ಭೀತಿ ಎದುರಾಗಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ತುರ್ತುಸಭೆ ಕರೆದಿದ್ದಾರೆ.

ಭೀಕರ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ವಿಂದ್ಯಾ. ಬುಂದೇಲ್ ಖಂಡ್, ಜಬಲ್ ಪುರ, ವಿದಿಶಾ, ರೈಸನ್, ರೇವಾದಲ್ಲಿ ಸಾಕಷ್ಟು ಮನೆಗಳು ನಾಶವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿದೆ.  

ರಾಜ್ಯದ ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ರೇವಾ, ಸಾಟ್ನ, ಸಿಧಿ, ಛತ್ತಾರ್ಪುರ್, ಪನ್ನಾ, ಕಾಟ್ನಿ, ದಾಮೋಹ್ ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಇದೀಗ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಹಲವೆಡೆ ಜಲಾವೃತ್ತವಾಗಿದ್ದು, ಪರಿಣಾಮ ಸಾಕಷ್ಟು ಪ್ರದೇಶಗಳಲ್ಲಿ ಸಂಚಾರಕ್ಕೆ ಅಡತಡೆಗಳು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಮಂಡಳಿಗಳು ಸಿಧಿ, ಕಾಟ್ನಿ ಮತ್ತು ಇನ್ನಿತರೆ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ.

ರೇವಾ ಜಿಲ್ಲೆ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಸೇನಾ ಪಡೆ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇನ್ನು 24 ಗಂಟೆಗಳ ಕಾಲ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚೌಹಾಣ್ ಅವರು ರಾಜ್ಯ ಪರಿಸ್ಥಿತಿ ಅವಲೋಕನಕ್ಕಾಗಿ ತುರ್ತುಸಭೆಯನ್ನು ಕರೆದಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com