ಹೈದರಾಬಾದ್ ಶಾಲಾ ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ: ಗೋವಾದಲ್ಲಿ ಸಿಕ್ಕಿಬಿದ್ದ ಯುವಕರು

ಹೈದರಾಬಾದ್ ಶಾಲಾ ವಿದ್ಯಾರ್ಥಿಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನಾಪತ್ತೆಯಾಗಿದ್ದ ನಾಲ್ಕು ವಿದ್ಯಾರ್ಥಿಗಳು ಇದೀಗ ಗೋವಾ ಪೊಲೀಸರ...
ಹೈದರಾಬಾದ್ ಪೊಲೀಸರು (ಸಂಗ್ರಹ ಚಿತ್ರ)
ಹೈದರಾಬಾದ್ ಪೊಲೀಸರು (ಸಂಗ್ರಹ ಚಿತ್ರ)

ಹೈದರಾಬಾದ್: ಹೈದರಾಬಾದ್ ಶಾಲಾ ವಿದ್ಯಾರ್ಥಿಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನಾಪತ್ತೆಯಾಗಿದ್ದ ನಾಲ್ಕು ವಿದ್ಯಾರ್ಥಿಗಳು ಇದೀಗ ಗೋವಾ ಪೊಲೀಸರ ವಶದಲ್ಲಿರುವುದಾಗಿ ಬುಧವಾರ ತಿಳಿದುಬಂದಿದೆ.

ಹೈದರಾಬಾದ್ ನ ಉಪ್ಪಲ್ ಮೂಲದವರಾಗಿರುವ 4 ವಿದ್ಯಾರ್ಥಿಗಳು 9ನೇ ತರಗತಿ ಓದುತ್ತಿದ್ದು, ಮಂಗಳವಾರ ನಾಪತ್ತೆಯಾಗಿದ್ದಾರೆಂದು ಎಲ್ ಬಿ ನಗರ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು. ಇದರಂತೆ ವಿಚಾರಣೆ ನಡೆಸಿದ ಪೊಲೀಸರಿಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದ ಹಣ ಹಾಗೂ ಒಡವೆಗಳೊಂದಿಗೆ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿತ್ತು.

ನಂತರ ವಿದ್ಯಾರ್ಥಿಗಳು ಗೋವಾ ಬಸ್ ಹತ್ತಿರುವುದಾಗಿ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಗೋವಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯನ್ವಯ ಇದೀಗ ಗೋವಾ ಪೊಲೀಸರು ವಿದ್ಯಾರ್ಥಿಗಳನ್ನು ಹುಡುಕಿದ್ದು, ತಮ್ಮ ವಶದಲ್ಲಿರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ನಾಲ್ಕು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿದ್ದ ಬೆಲೆಬಾಳುವ ಒಡವೆಗಳು ಹಾಗೂ ಹಣವನ್ನು ಕಳ್ಳತನ ಮಾಡಿ ಬಸ್ ಹತ್ತಿ ಗೋವಾಗೆ ಬಂದಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದರಂತೆ ಗೋವಾ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಇದೀಗ ಗೋವಾ ಪೊಲೀಸರು ವಿದ್ಯಾರ್ಥಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಕರೆತರಲು ಪೊಲೀಸರನ್ನು ಗೋವಾಗೆ ಕಳುಹಿಸಲಾಗಿದೆ ಎಂದು ಉಪ್ಪಲ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ವೈ. ನರಸಿಂಹ ರೆಡ್ಡಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com