ಎನ್ ಸಿಪಿ(ನ್ಯಾಷನಲ್ ಕಾಂಗ್ರೆಸ್ ಪಕ್ಷ) ನಾಯಕ ಮಜಿದ್ ಮೆಮನ್
ಎನ್ ಸಿಪಿ(ನ್ಯಾಷನಲ್ ಕಾಂಗ್ರೆಸ್ ಪಕ್ಷ) ನಾಯಕ ಮಜಿದ್ ಮೆಮನ್

ಬಲೂಚಿಸ್ತಾನ ಆಂತರಿಕ ವಿಚಾರದಲ್ಲಿ ಭಾರತ ತಲೆ ಹಾಕುವುದಿಲ್ಲ ಎಂದು ಮೋದಿ ಸ್ಪಷ್ಟನೆ ನೀಡಬೇಕು: ಎನ್ ಸಿಪಿ

ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ಭಾರತ ತಲೆ ಹಾಕುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಎನ್ ಸಿಪಿ(ನ್ಯಾಷನಲ್ ಕಾಂಗ್ರೆಸ್ ಪಕ್ಷ) ನಾಯಕ...

ಮುಂಬೈ: ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ಭಾರತ ತಲೆ ಹಾಕುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಎನ್ ಸಿಪಿ(ನ್ಯಾಷನಲ್ ಕಾಂಗ್ರೆಸ್ ಪಕ್ಷ) ನಾಯಕ ಮಜಿದ್ ಮೆಮನ್ ಅವರು ಗುರುವಾರ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಲೂಚಿಸ್ಥಾನದ ಹೋರಾಟದ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಬೆಂಬಲಿಸಿ ನಿನ್ನೆಯಷ್ಟೇ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಭಾರತದ ಧ್ವಜ ಹಾಗೂ ಮೋದಿಯವರ ಭಾವಚಿತ್ರವನ್ನು ಪ್ರದರ್ಶಿಸಿದ್ದರು. ಅಲ್ಲದೆ, ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು, ಪಾಕ್ ರಾಷ್ಟ್ರ ಧ್ವಜವನ್ನು ತುಳಿದು, ಅದನ್ನು ಸುಟ್ಟುಹಾಕಿ ತಮ್ಮ ಆಕ್ರೋಶ ಪ್ರದರ್ಶಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮೆಮನ್ ಅವರು, ಸ್ವಾತಂತ್ರ್ಯದ ದಿನದಂದು ಬಲೂಚಿಸ್ತಾನದ ವಿಚಾರವನ್ನು ಮೋದಿಯವರು ಪ್ರಸ್ತಾಪ ಮಾಡಿದ್ದರು. ಈ ವಿಚಾರವನ್ನು ಯಾವ ಕಾರಣಕ್ಕಾಗಿ ಪ್ರಸ್ತಾಪ ಮಾಡಿದ್ದರು ಎಂಬುದನ್ನು ಮೋದಿಯವರು ಸ್ಪಷ್ಟಪಡಿಸಬೇಕಿದೆ. ಒಂದು ವೇಳೆ ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡಿದರೆ ಭಾರತ ಪರಿಸ್ಥಿತಿ ಹದಗೆಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಇಂತಹ ಸಮಯದಲ್ಲಿ ಭಾರತ ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ತಲೆ ಹಾಕದಿದ್ದರೆ ಒಳ್ಳೆಯದು. ಈ ಬೆಳವಣಿಗೆ ದೇಶಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ಭಾರತ ತಲೆ ಹಾಕುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಸ್ಪಷ್ಟನೆ ನೀಡಬೇಕಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಭಾರತ ವಿರೋಧಿಸುತ್ತದೆ ಎಂಬ ಸಂದೇಶವನ್ನು ತಿಳಿಸಬೇಕಿದೆ.

ಬಲೂಚಿಸ್ತಾನದ ವಿಚಾರದಲ್ಲಿ ತಲೆಹಾಕುವ ಯೋಚನೆ ಪ್ರಧಾನಿ ಮೋದಿಯವರಿಗಿಲ್ಲ ಎಂದು ನಾನು ತಿಳಿದಿದ್ದೇನೆ. ಬಲೂಚಿಸ್ತಾನದಲ್ಲಿ ಈಗಾಗಲೇ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಮೋದಿಯವರು ಈ ಬಗ್ಗೆ ಸ್ಪಷ್ಟನೆ ನೀಡದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಹದಗೆಡುವ ಸಾಧ್ಯತೆಗಳಿವೆ. ಸ್ಪಷ್ಟನೆ ನೀಡಲು ಇದು ಉತ್ತಮ ಸಮಯವಾಗಿದೆ. ಬಲೂಚಿಸ್ತಾನದ ಕುರಿತು ನಮ್ಮ ನಿಲುವು ಹೀಗೆ ಮುಂದುವರೆದಿದ್ದೇ ಆದಲ್ಲಿ, ಬಲೂಚಿಸ್ತಾನದ ಆಂತರಿಕ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಹೀಗಾಗಿ ಮೋದಿಯವರು ಕೂಡಲೇ ಸ್ಪಷ್ಟನೆ ನೀಡಬೇಕು. ಇಲ್ಲದೆ ಇದ್ದಲ್ಲಿ ಒಂದು ಗುಂಪಿನ ವಿರುದ್ಧ ಮತ್ತೊಂದು ಗುಂಪು ಪ್ರತಿಭಟನೆ ನಡೆಸುವುದು ಹೀಗೆ ಪ್ರತಿಭಟನೆಗಳು ಮುಂದುವರೆಯುತ್ತಿರುತ್ತದೆ. ಬಲೂಚಿಸ್ತಾನದಲ್ಲಿ ನಮ್ಮ ಪಕ್ಷವಿಲ್ಲ. ಅದರಿಂದ ಅಂತರ ಕಾಪಾಡುವುದು ದೇಶಕ್ಕೆ ಒಳ್ಳೆಯದು ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com