

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಒತ್ತಡವನ್ನು ಎಚ್ಚರಿಕೆಯಾಗಿ ಪರಿಗಣಿಸಿ ಆತನನ್ನು ಗಡಿಪಾರು ಮಾಡಬೇಕು ಎಂದು ಭಾರತ ಪುನರುಚ್ಛರಿಸಿದೆ.
ದಾವೂದ್ ಇಬ್ರಾಹಿಂ ಹಲವು ಅಪರಾಧಗಳಲ್ಲಿ ತೊಡಗಿದ್ದರೂ ಪಾಕಿಸ್ತಾನ ಆತನನ್ನು ನ್ಯಾಯಾಂಗದಿಂದ ರಕ್ಷಿಸುತ್ತಿದೆ ಎಂದಿರುವ ಭಾರತ ಇತ್ತೀಚೆಗಷ್ಟೇ ಆತನ ವಿಳಾಸಕ್ಕೆ ಸಂಬಂಧಿಸಿದ ವಿವರಗಳನ್ನು ವಿಶ್ವಸಂಸ್ಥೆ ಸ್ಪಷ್ಟಪಡಿಸಿರುವುದನ್ನು ಉಲ್ಲೇಖಿಸಿದ್ದು, ಪಾಕಿಸ್ತಾನ ದಾವೂದ್ ಇಬ್ರಾಹಿಂ ನನ್ನ ರಕ್ಷಿಸುತ್ತಿದೆ ಎಂದು ಭಾರತ ಲಾಗಾಯ್ತಿನಿಂದ ಪ್ರತಿಪಾದಿಸುತ್ತಿದೆ ಎಂದಿದೆ. ಜಾಗತಿಕ ಮಟ್ಟದ ಭಯೋತ್ಪಾದಕ ದಾವೂದ್ ಇಬ್ರಾಹಿಂ ನನ್ನ ಗಡಿಪಾರು ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ನಿರಂತರವಾಗಿ ಒತ್ತಡ ಹೇರುತ್ತಿದೆ. ಈಗಲಾದರೂ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಒತ್ತಡದಿಂದ ಎಚ್ಚೆತ್ತುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.