ಪಣಜಿ: ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಎರಡೂವರೆ ಕೆಜಿ ತೂಕದ ಚಿನ್ನವನ್ನು ಸುಂಕ ಮತ್ತು ಕೇಂದ್ರ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಮಾನ ದುಬೈಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಗಮಿಸಿತ್ತು.
''ವಿಮಾನದ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಡಲಾಗಿತ್ತು. ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಎರಡೂವರೆ ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಅದರ ವಾರಸುದಾರರು ಯಾರೆಂದು ಗೊತ್ತಾಗಿಲ್ಲ ಎನ್ನುತ್ತಾರೆ ಸುಂಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ವಿಮಾನಕ್ಕೆ ಹತ್ತಿದ ಪ್ರಯಾಣಿಕರನ್ನು ಕೂಡ ತಪಾಸಣೆ ನಡೆಸಲಾಗುತ್ತದೆ.
ಸುಂಕ ಅಧಿಕಾರಿಗಳು ತಮ್ಮ ನಿಯಮಗಳನ್ನು ಮುಗಿಸಿದ ನಂತರ ವಿಮಾನ ಗೋವಾದಿಂದ ಬೆಂಗಳೂರಿಗೆ ಹೊರಟಿತು. ಏರ್ ದುಬೈಯಿಂದ ಗೋವಾಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಹೀಗೆ ವಾರಸುದಾರರಿಲ್ಲದ ಚಿನ್ನ ಸಿಗುತ್ತಿರುವುದು ಈ ವರ್ಷದಲ್ಲಿ ಇದು ಮೂರನೇ ಸಲ ಎಂದು ವಕ್ತಾರ ತಿಳಿಸಿದ್ದಾರೆ.