ನಿನ್ನೆ ದೆಹಲಿಯಲ್ಲಿ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಮತ್ತು ಲಷ್ಕರ್ -ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ಡಿ-ಕಂಪೆನಿಯಂಥ ಭಯೋತ್ಪಾದತ ಜಾಲಗಳನ್ನು ನಾಶಮಾಡಬೇಕು. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭಯೋತ್ಪಾದನೆ ಬಗ್ಗೆ ನಾನು ಕೆರ್ರಿಯವರಿಗೆ ವಿವರಿಸಿದ್ದೇನೆ. ದೇಶ ಯಾವತ್ತೂ ದ್ವಿಮುಖ ಧೋರಣೆ ಹೊಂದಿರಬಾರದು. ಭಯೋತ್ಪಾದಕರಲ್ಲಿ ಒಳ್ಳೆಯವರು, ಕೆಟ್ಟವರೆಂದಿಲ್ಲ. ದೇಶಗಳು ಸಹ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಅಭಯಾರಣ್ಯವಾಗಬಾರದು ಎಂದು ಹೇಳಿದರು.