ಹಳೆಯ ಮಸೀದಿ ಮರು ನಿರ್ಮಾಣಕ್ಕೆ ಅಯೋಧ್ಯೆ ದೇವಸ್ಥಾನದ ಧನಸಹಾಯ

ಬಾಬ್ರಿ ಮಸೀದಿ ಧ್ವಂಸಗೊಂಡು 24 ವರ್ಷದ ಬಳಿಕ 300 ವರ್ಷಗಳ ಹಳೆಯ ಶಿಥಿಲಗೊಂಡ ಮಸೀದಿಯನ್ನು ಅಯೋಧ್ಯೆಯ ಹನುಮಂಗರಿ ದೇವಸ್ಥಾನಕ್ಕೆ...
ಅಯೋಧ್ಯೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಆಲಂಗಿರಿ ಮಸೀದಿ
ಅಯೋಧ್ಯೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಆಲಂಗಿರಿ ಮಸೀದಿ
Updated on: 
ಅಯೋಧ್ಯೆ: ಕೋಮು ಸೌಹಾರ್ದತೆಗೆ ಒಂದು ಒಳ್ಳೆಯ ಉದಾಹರಣೆ ಇದು. ಅಯೋಧ್ಯೆಯ ದೇವಸ್ಥಾನವೊಂದು 300 ವರ್ಷಗಳಷ್ಟು ಹಳೆಯ ಶಿಥಿಲಗೊಂಡ ಮಸೀದಿಯನ್ನು ತನ್ನ ಜಾಗದಲ್ಲಿಯೇ ಮರು ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.

ಇಲ್ಲಿನ ಹನುಮಾನ್ ಗರ್ಹಿ ದೇವಸ್ಥಾನ ಮಂಡಳಿಯು ಆಲಂಗಿರಿ ಮಸೀದಿ ಮರು ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಲ್ಲದೆ ಅದರ ಖರ್ಚನ್ನು ಭರಿಸಲು ಒಪ್ಪಿದೆ. ಅಲ್ಲದೆ ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಲು ಮುಸ್ಲೀಮರಿಗೆ ಸ್ವಾಗತ ಎಂದೂ ಸಹ ಹೇಳಿದೆ.

ಇದರ ಇತಿಹಾಸವನ್ನು ನೋಡಿದರೆ, 17ನೇ ಶತಮಾನದಲ್ಲಿ ಮೊಗಲ್ ರಾಜ ಔರಂಗಜೇಬನ ಒಪ್ಪಿಗೆ ಮೇರೆಗೆ ಆತನ ಸೇನಾಪತಿ ಅಯೋಧ್ಯೆಯಲ್ಲಿ ಆಲಂಗಿರಿ ಮಸೀದಿಯನ್ನು ನಿರ್ಮಿಸಿದ್ದ. ನವಾಜ್ ಶುಜೌದ್ದುಲ್ಲಾ ಮಸೀದಿ ಸ್ಥಳವನ್ನು 1765ರಲ್ಲಿ ದೇವಸ್ಥಾನಕ್ಕೆ ದಾನ ನೀಡಿದ್ದನು. ಮಸೀದಿಯಲ್ಲಿ ನಮಾಜ್ ಮುಂದುವರಿಸಲು ಅವಕಾಶ ನೀಡಬೇಕೆಂಬ ಷರತ್ತಿನೊಂದಿಗೆ ಭೂಮಿ ನೀಡಲಾಗಿತ್ತು.

ಆಲಂಗಿರಿ ಮಸೀದಿ ಶಿಥಿಲಾವಸ್ಥೆಯಲ್ಲಿದ್ದು, ಅದರೊಳಗೆ ಹೋಗದಂತೆ ಸ್ಥಳೀಯ ಪಾಲಿಕೆಯು ನೊಟೀಸು ಹಚ್ಚಿದ ಬಳಿಕ, ಮಸೀದಿ ಜಾಗ ಹೊಂದಿರುವ ಹನುಮಾನ್ ಗರ್ಹಿ ದೇವಸ್ಥಾನ ಟ್ರಸ್ಟ್ ಮಸೀದಿಯನ್ನು ಮತ್ತೆ ಕಟ್ಟಲು ಮುಸಲ್ಮಾನ ಬಾಂಧವರಿಗೆ ಅವಕಾಶ ನೀಡಿದ್ದು, ಅದರ ವೆಚ್ಚವನ್ನು ತಾನೇ ಭರಿಸುವುದಾಗಿ ಮತ್ತು ಅದರ ಆವರಣದಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ನಿರಪೇಕ್ಷಣಾ ಪ್ರಮಾಣಪತ್ರ ಕೂಡ ಕೊಡಲಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com