ಭದ್ರತಾ ಪಡೆಗಳು ಅಟ್ಟಿಸಿಕೊಂಡು ಹೋಗಿದ್ದರಿಂದ ನದಿಯಲ್ಲಿ ಮುಳುಗಿದ ಕಾಶ್ಮೀರಿ
ಕಲ್ಲೆಸೆತದ ಪ್ರತಿಭಟನೆಯ ವೇಳೆಯಲ್ಲಿ ನೂರಾರು ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಅಟ್ಟಾಡಿಸಿಕೊಂಡು ಹೋದದ್ದಕ್ಕೆ ಶ್ರೀನಗರ ಝೇಲಂ ನದಿಯಲ್ಲಿ ಗುರುವಾರ ವ್ಯಕ್ತಿಯೊಬ್ಬ ಕೊಚ್ಚಿಹೋಗಿದ್ದಾನೆ
ಶ್ರೀನಗರ: ಕಲ್ಲೆಸೆತದ ಪ್ರತಿಭಟನೆಯ ವೇಳೆಯಲ್ಲಿ ನೂರಾರು ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಅಟ್ಟಾಡಿಸಿಕೊಂಡು ಹೋದದ್ದಕ್ಕೆ ಶ್ರೀನಗರ ಝೇಲಂ ನದಿಯಲ್ಲಿ ಗುರುವಾರ ವ್ಯಕ್ತಿಯೊಬ್ಬ ಕೊಚ್ಚಿಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳಿದ್ದಾರೆ.
ನಾಲ್ಕಕ್ಕಿಂತಲೂ ಹೆಚ್ಚು ಜನ ಗುಂಪುಗೂಡದಂತೆ ಇರುವ ನಿಷೇಧಾಜ್ಞೆಯನ್ನು ಮುರಿದು ಝೇಲಂ ನದಿ ಬಳಿ ಇರುವ ಹಳೆ ಶ್ರೀನಗರ ನಗರದ ಪಾಲಪೂರ ಪ್ರದೇಶದಲ್ಲಿ ನೂರಾರು ಜನ ಜಮಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜನರನ್ನು ಚದುರಿಸಲು ಭದ್ರತಾ ಪಡೆಗಳು ಪ್ರಯತ್ನಿಸಿದಾಗ, ಕುಪಿತಗೊಂಡ ಪ್ರತಿಭಟನಾಕಾರರು ಕಲ್ಲೆಸೆತಕ್ಕೆ ಮುಂದಾದರು. ಆಗ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆ ಅವರು ಅಟ್ಟಾಡಿಸಿಕೊಂಡು ಹೋಯಿತು. ಬಂಧನ ಭೀತಿಯಿಂದ ಪ್ರತಿಭಟನಾಕಾರನೊಬ್ಬ ಝೇಲಂ ನದಿಯಲ್ಲಿ ಬಿದ್ದು ಮೃತನಾದ. ಅವನ ದೇಹವನ್ನು ನಂತರ ಹೊರತೆಗೆಯಲಾಗಿದೆ.
ಜುಲೈ 8 ರಂದು ಭದ್ರತಾ ಪಡೆಗಳು ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆಗೈದಾಗಿಲಿಂದಲೂ ನಡೆದಿರುವ ಕಾಶ್ಮೀರ ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಇಬ್ಬರು ಪೊಲೀಸರನ್ನು ಒಳಗೊಂಡಂತೆ 73 ಜನ ಮೃತಪಟ್ಟಿದ್ದಾರೆ.