ಹತ್ಯೆಗೂ ಮುನ್ನ ಹಫೀಜ್ ಸಯೀದ್'ಗೆ ಕರೆ ಮಾಡಿದ್ದ ಬುರ್ಹಾನ್ ವಾನಿ!

ಎನ್ ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದ್ದ ಉಗ್ರ ಬುರ್ಹಾನ್ ವಾನಿ ಹಾಗೂ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಡುವೆ ನಂಟಿತ್ತು ಎಂಬ ವಿಚಾರ ಇದೀಗ ಬಯಲಾಗಿದ್ದು, ಸಾವಿಗೂ ಮುನ್ನ ವಾನಿ...
ಉಗ್ರ ಬುರ್ಹಾನ್ ವಾನಿ ಹಾಗೂ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್
ಉಗ್ರ ಬುರ್ಹಾನ್ ವಾನಿ ಹಾಗೂ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್

ನವದೆಹಲಿ: ಎನ್ ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದ್ದ ಉಗ್ರ ಬುರ್ಹಾನ್ ವಾನಿ ಹಾಗೂ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಡುವೆ ನಂಟಿತ್ತು ಎಂಬ ವಿಚಾರ ಇದೀಗ ಬಯಲಾಗಿದ್ದು, ಸಾವಿಗೂ ಮುನ್ನ ವಾನಿ, ಹಫೀಜ್ ಸಯೀದ್'ಗೆ ಕರೆ ಮಾಡಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತ ದಾಖಲೆಯೊಂದು ಇದೀಗ ಬಹಿರಂಗಗೊಂಡಿದ್ದು, ಉಗ್ರ ಹಫೀಜ್ ಸಯೀದ್ ಜೊತೆ ಬುರ್ಹಾನ್ ವಾನಿ ಮಾತನಾಡಿರುವ ಆಡಿಯೋ ಟೇಪ್ ವೊಂದು ಬಹಿರಂಗಗೊಂಡಿದೆ. ಇದರಂತೆ ಬುರ್ಹಾನ್ ವಾನಿಯೊಬ್ಬ ಅಮಾಯಕನೆಂದು ಹೇಳುತ್ತಿದ್ದ ಪಾಕಿಸ್ತಾನದ ಬಣ್ಣ ಇದೀಗ ಬಯಲಾಗಿದೆ.

ಭಾರತದ ಗುಪ್ತಚರ ವಾಹಿನಿಗಳು, ವಾನಿ ಹಾಗೂ ಸಯೀದ್ ನಡುವಿನ ದೂರವಾಣಿ ಕರೆಯನ್ನು ಕದ್ದಾಲಿಸಿದ್ದು, ಈ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಇಬ್ಬರು ನಡುವಿನ ಸಂಭಾಷಣೆಯಲ್ಲಿ ಉಗ್ರ ಬುರ್ಹಾನ್ ವಾನಿ ಹಫೀಜ್ ಸಯೀದ್ ಬಳಿ ಕೆಲ ಕೋರಿಕೆಗಳನ್ನು ಹೇಳಿಕೊಂಡಿದ್ದಾರೆ. ಕಾಶ್ಮೀರದಲ್ಲಿರುವ ಲಷ್ಕರ್ ಇ-ತೊಯ್ಬಾ ಉಗ್ರರಿಗೆ ಶಸ್ತ್ರಾಸ್ತ್ರಗಳು ಹಾಗೂ ಹಣದ ಸಹಾಯವನ್ನು ಮಾಡುವಂತೆ ಕೇಳುತ್ತಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಯೀದ್, ನೀವು ಕಾಶ್ಮೀರದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ಚಿಂತಿಸಬೇಡಿ. ನಿಮಗೆ ಏನು ಬೇಕೋ ಅದನ್ನು ಕೇಳಿ, ಯಾವುದೇ ಸಹಾಯ ಮಾಡಲು ನಾವು ತಯಾರಿದ್ದೇವೆ, ಎಲ್ಲದಕ್ಕೂ ಸಿದ್ದರಿದ್ದೇವೆ. ಏನು ಬೇಕು ಅಂತ ನೀವು ಕೇಳಬೇಕಷ್ಟೇ ಎಂದು ಹೇಳಿದ್ದಾನೆ.

ತದನಂತರ ಮಾತನಾಡಿರುವ ವಾನಿ, ಶತ್ರುಗಳು ಬಹುತೇಕವಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಇದೇ ಪರಿಸ್ಥಿತಿಯನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ. ಎಲ್ಲಾ ರೀತಿಯಲ್ಲಿ ನಾವು ದಾಳಿ ನಡೆಸಲಿದ್ದೇವೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಇದಕ್ಕಾಗಿ ನಮಗೆ ಶಸ್ತ್ರಾಸ್ತ್ರಗಳು, ಹಣ ಹಾಗೂ ಬೆಂಬಲ ಬೇಕಿದೆ. ಹಿಜ್ಬುಲ್ ಸಂಘಟನೆ ಹಾಗೂ ಲಷ್ಕರ್ ಇ-ತೊಯ್ಬಾ ಸಂಘಟನೆಗಳು ಕೈಜೋಡಿಸಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳುತ್ತಾನೆ.

ಕೆಲ ತಿಂಗಳುಗಳ ಹಿಂದಷ್ಟೇ ಉಗ್ರ ಬುರ್ಹಾನ್ ವಾನಿಯನ್ನು ಕಾಶ್ಮೀರದಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಈ ಹತ್ಯೆಗೆ ಪ್ರತ್ಯೇಕತಾವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.  ಬುರ್ಹಾನ್ ವಾನಿಯೊಬ್ಬ ಅಮಾಯಕನಾಗಿದ್ದು, ಯುವಕರ ನಾಯಕನಾಗಿದ್ದ ಎಂದು ಹೇಳಿದ್ದರು. ಹತ್ಯೆಗೆ ವಿರೋಧ ವ್ಯಕ್ತಪಡಿಸಿದ ಬಂದ್'ಗೆ ಕರೆ ನೀಡಿದ್ದರು. ಪ್ರತ್ಯೇಕತಾವಾದಿಗಳ ಈ ಕರೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ದಿನಗಳ ಕಾಲ ಹಿಂಸಾಚಾರ ಉಂಟಾಗಿದ್ದು, ಕಾಶ್ಮೀರದಲ್ಲಿ ಶಾಂತಿ ಕಾಪಾಡಲು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹರಸಾಹಸ ಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com