ನವದೆಹಲಿ: ಕಾಶ್ಮೀರದ ನಿರ್ಮಾಣವಾಗಿರುವ ಹಿಂಸಾಚಾರಕ್ಕೆ ಪಾಕಿಸ್ತಾನವನ್ನು ದೂಷಿಸಬಾರದು ಎಂದು ಹೇಳಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬೆನ್ನಿಗೆ ಇದೀಗ ಆರ್'ಜೆಡಿ ನಿಂತಿದ್ದು, ಒಮರ್ ಅಬ್ದುಲ್ಲಾರಂತಹ ಜನರ ಮಾತನ್ನು ಕೇಳುವ ಅಗತ್ಯವಿದೆ ಎಂದು ಶನಿವಾರ ಹೇಳಿದೆ.
ಈ ಕುರಿತಂತೆ ಮಾಡನಾಡಿರುವ ರಾಷ್ಟ್ರೀಯ ಜನತಾದಳದ ನಾಯಕ ಮನೋಜ್ ಝಾ ಅವರು, ಒಮರ್ ಅಬ್ದುಲ್ಲಾರಂತಹ ಜನರ ಮಾತನ್ನು ಕೇಳುವ ಅಗತ್ಯವಿದ್ದು, ಅವರ ಮಾತನ್ನು ಅರ್ಥಮಾಡಿಕೊಳ್ಳಬೇಕಿದೆ. ಒಮರ್ ಅಬ್ದುಲ್ಲಾ ಅವರ ಹೇಳಿಕೆಯ ಮೂಲತತ್ವವೇನಿದೆ, ಕಾಶ್ಮೀರ ಸಮಸ್ಯೆ ಕುರಿತು ಮಾತನಾಡುತ್ತಿರಬೇಕು. ಸಮಸ್ಯೆ ಕುರಿತು ಎಲ್ಲರೂ ಒಟ್ಟಾಗಿ ಮಾತುಕತೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರ ಸಮಸ್ಯೆ ಕುರಿತಂತೆ ಮಾತನಾಡುವ ಪ್ರಕ್ರಿಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಯಂತ್ರಣ ಹೇರುತ್ತಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿರುವ ಜನತೆಯೊಂದಿಗೆ ಮಾತುಕತೆಯೇ ನಡೆಸದಿದ್ದರೆ, ಸಮಸ್ಯೆ ಬಗೆಹರಿಯುವುದಾದರೂ ಹೇಗೆ? ಪಾಕಿಸ್ತಾನವೊಂದು ಪಿಡುಗಾಗಿ ಭಾರತಕ್ಕೆ ಅಂಟಿಕೊಂಡಿದ್ದು, ಇದರ ವಿರುದ್ಧ ನಾವು ಹಲವು ವರ್ಷಗಳಿಂದರೂ ಹೋರಾಡುತ್ತಲೇ ಬಂದಿದ್ದೇವೆ. ಸರ್ಕಾರ ಮೊದಲು ಪ್ರಸ್ತುತ ಇರುವ ಸಮಸ್ಯೆ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
Advertisement