ಭದ್ರತೆ ದೃಷ್ಟಿಯಿಂದ ಸರ್ತಾಜ್ ಅಜೀಜ್'ಗೆ ಸ್ವರ್ಣ ಮಂದಿರ ಪ್ರವೇಶ ನಿರಾಕರಣೆ: ಕೇಂದ್ರ

ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ ಪ್ರಧಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರಿಗೆ ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಪ್ರವೇಶ ಮಾಡಲು ನಿರಾಕರಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟನೆ...
ಪಾಕಿಸ್ತಾನ ಪ್ರಧಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್
ಪಾಕಿಸ್ತಾನ ಪ್ರಧಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್

ನವದೆಹಲಿ: ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ ಪ್ರಧಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರಿಗೆ ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ಪ್ರವೇಶ ಮಾಡಲು ನಿರಾಕರಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟನೆ ನೀಡಿದೆ.

ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಹಿನ್ನಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ಅಮೃತಸರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ವರ್ಣ ಮಂದಿರಕ್ಕೆ ಪ್ರವೇಶ ಮಾಡಲು ನಿರಾಕರಿಸಲಾಗಿತ್ತು. ಅಲ್ಲದೆ, ಸಮ್ಮೇಳನದ ಸಮಯದಲ್ಲಿ ಅಜೀಜ್ ಅವರಿಗೆ ಮಾತನಾಡಲು ಅವಕಾಶಗಳನ್ನು ಮಾಡಿಕೊಡಲಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತಂತೆ ಪಾಕಿಸ್ತಾನ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿತ್ತು.

ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಭದ್ರತೆ ಹಿತದೃಷ್ಟಿಯಿಂದಾಗಿ ಸರ್ತಾಜ್ ಅಜೀಜ್ ಅವರಿಗೆ ಸ್ವರ್ಣ ಮಂದಿರ ಪ್ರವೇಶ ಮಾಡಲು ನಿರಾಕರಿಸಲಾಗಿದ್ದು, ಭಾರತವನ್ನು ದೂಷಿಸುವ ಹಕ್ಕು ಪಾಕಿಸ್ತಾನಕ್ಕೆ ಇಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com