ವಿಯೆಟ್ನಾಂ ಫೈಟರ್ ಪೈಲಟ್ ಗಳಿಗೆ ಭಾರತದ ತರಬೇತಿ: ಚೀನಾ ತಂತ್ರಕ್ಕೆ ಹೊಸ ಪ್ರತಿತಂತ್ರ

ಭಾರತದ ವಿರುದ್ಧ ಚೀನಾ ಹೆಣೆಯುತ್ತಿರುವ ಪ್ರತಿತಂತ್ರಕ್ಕೆ ಭಾರತ ಹೊಸ ಪ್ರತಿತಂತ್ರ ಹೆಣೆಯಲು ಪ್ರಾರಂಭಿಸಿದ್ದು, ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೆ ತರಬೇತಿ ನೀಡಲು ಮುಂದಾಗಿದೆ.
ವಿಯೆಟ್ನಾಂ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ವಿಯೆಟ್ನಾಂ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ನವದೆಹಲಿ: ಭಾರತದ ವಿರುದ್ಧ ಚೀನಾ ಹೆಣೆಯುತ್ತಿರುವ ಪ್ರತಿತಂತ್ರಕ್ಕೆ ಭಾರತ ಹೊಸ ಪ್ರತಿತಂತ್ರ ಹೆಣೆಯಲು ಪ್ರಾರಂಭಿಸಿದ್ದು, ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೆ ತರಬೇತಿ ನೀಡಲು ಮುಂದಾಗಿದೆ. 
ಭಾರತ ಸರ್ಕಾರ, ಹಲವು ವಿಚಾರಗಳಲ್ಲಿ ಚೀನಾದೊಂದಿಗೆ ವಿವಾದಗಳನ್ನು ಎದುರಿಸುತ್ತಿರುವ ವಿಯೆಟ್ನಾಂ ನೊಂದಿಗಿನ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೆ ತರಬೇತಿ ನೀಡಲು ಭಾರತ ಸರ್ಕಾರ ಮುಂದಾಗಿದೆ. 
ಸುಕೋಯ್ -30 ಎಂಕೆಐ ಯುದ್ಧ ವಿಮಾನಗಳನ್ನು ಬಳಸಿಕೊಂಡು ವಿಯೆಟ್ನಾಂ ನ ಫೈಟರ್ ಪೈಲಟ್ ಗಳಿಗೆ 2017 ರಿಂದ ತರಬೇತಿ ನೀಡುವ ಯೋಜನೆ ಹೊಂದಲಾಗಿದೆ. ಈ ಕುರಿತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ವಿಯೆಟ್ನಾಂ ನ ರಕ್ಷಣಾ ಸಚಿವರು ಡಿ.5 ರಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಗೆ ಭೇಟಿ ನೀಡಿದ್ದಾಗ ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರಗಳ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೆರವಾಗುವ ಹಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com