
ನವದೆಹಲಿ: ಪಾಕಿಸ್ತಾನ ತನ್ನ ಪ್ರಬಲ ಅಣ್ವಸ್ತ್ರಗಳನ್ನು ಹೆಚ್ಚಿಸುತ್ತಿರುವುದರ ಕುರಿತಂತೆ ಭಾರತಕ್ಕೆ ಅರವಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನ ತನ್ನಲ್ಲಿರುವ ಅಣ್ವಸ್ತ್ರಗಳನ್ನು ಭಾರತದತ್ತ ಮುಖಮಾಡಿ ನಿಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ದೇಶದ ಭದ್ರತೆಯನ್ನು ಹೆಚ್ಚಿಸುವ ಹಾಗೂ ದೇಶಕ್ಕೆ ಎದುರಾಗುವ ಯಾವುದೇ ಬೆದರಿಕೆಗಳನ್ನು ಎದುರಿಸುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಭಾರತದ ವಿರುದ್ಧ ಹಿಂದಿನಿಂದಲೂ ಕತ್ತಿ ಮಸೆಯುತ್ತಲೇ ಬಂದಿರುವ ಪಾಕಿಸ್ತಾನದ ಗೋಸುಂಬೆ ಬುದ್ಧಿ ಇತ್ತೀಚೆಗಷ್ಟೇ ಬಯಲಾಗಿತ್ತು. ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಉಗ್ರರ ದಾಳಿಗೆ ತೀವ್ರ ಕೆಂಡಾಮಂಡಲವಾಗಿರುವ ಭಾರತ ಯಾವಾಗ ಬೇಕಾದರೂ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯದಲ್ಲಿರುವ ಪಾಕಿಸ್ತಾನ, ಈಗಾಗಲೇ ಸಕಲ ತಯಾರಿಗಳನ್ನು ನಡೆಸುತ್ತಿದ್ದು, ಭಾರತದ ಸೇನೆಯ ದಾಳಿಯನ್ನು ತಡೆಯಲು ಬೆದರಿಕೆಯ ರೀತಿಯಲ್ಲಿ ಸಿಡಿತಲೆಗಳನ್ನು ಭಾರತದತ್ತ ನೆಟ್ಟುವ ಮೂಲಕ ಬೆದರಿಕೆಗಳನ್ನು ಒಡ್ಡಲು ಪ್ರಯತ್ನಗಳನ್ನು ಮಾಡುತ್ತಿದೆ.
ಈಗಾಗಲೇ ಸುಮಾರು 130ರಿಂದ 140 ಕ್ಷಿಪಣಿಗಳನ್ನು ಪಾಕಿಸ್ತಾನ ಭಾರತದತ್ತ ಮುಖಮಾಡಿ ನಿಲ್ಲಿಸಿದೆ. ಅಲ್ಲದೆ, ಅಮೆರಿಕ ಜಾರಿ ಮಾಡಿದ್ದ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿರುವ ಪಾಕಿಸ್ತಾನ ಎಫ್-16 ಫೈಟರ್ ಗಳ ಮೂಲಕ ನ್ಯೂಕ್ಲಿಯನ್ ಸಿಡಿತಲೆಗಳನ್ನು, ಮಿರಾಜ್ ಫೈಟರ್ ಗಳಿಂದ ರಾಡ್ ಏರ್ ಲಾಂಚ್ ಕ್ರೂಸ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯಗಳನ್ನು ಅಳವಡಿಸಿದೆ ಎಂದು ಹೇಳಲಾಗುತ್ತಿತ್ತು.
Advertisement