ಭಾರತದಿಂದ ಆರ್ಥಿಕ ನೆರವು ಕೇಳಿದ ಮಂಗೋಲಿಯಾ ಮೂರ್ಖತನದ ನಡೆ ಎಂದ ಚೀನಾ

ಭಾರತದಿಂದ ಆರ್ಥಿಕ ನೆರವನ್ನು ಕೇಳಿರುವ ಮಂಗೋಲಿಯಾದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಮಾಧ್ಯಮ, ಮಂಗೋಲಿಯಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮಂಗೋಲಿಯಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಮಂಗೋಲಿಯಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಬೀಜಿಂಗ್: ಭಾರತದಿಂದ ಆರ್ಥಿಕ ನೆರವನ್ನು ಕೇಳಿರುವ ಮಂಗೋಲಿಯಾದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಮಾಧ್ಯಮ, ಮಂಗೋಲಿಯಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 
ಮಂಗೋಲಿಯಾದ ನಡೆಯನ್ನು ಮೂರ್ಖತನದ ನಡೆ ಎಂದು ಟೀಕಿಸಿರುವ ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್, ಚೀನಾ ಹಾಗೂ ರಷ್ಯಾದ ನಡುವೆ ಸಿಲುಕಿಕೊಂಡಿರುವ ಮಂಗೋಲಿಯಾ ತಟಸ್ಥವಾಗಿ ಉಳಿಯಲು ಯತ್ನಿಸುತ್ತಿದ್ದು, ಎರಡೂ ಕಡೆಗಳಿಂದ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ತನ್ನ ಲೇಖನದಲ್ಲಿ ಹೇಳಿದೆ. 
ನವದೆಹಲಿಯಲ್ಲಿರುವ ಮಂಗೋಲಿಯಾದ ರಾಯಭಾರಿ ಕಚೇರಿ ಅಧಿಕಾರಿ ಮಂಗೋಲಿಯಾ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯಿಂದ ಹೊರಬರಲು ನೆರವು ನೀಡಬೇಕೆಂದು ಭಾರತಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ನಿರಾಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com