ರಾಷ್ಟ್ರೀಯ ಮಾದಕ ವ್ಯಸನ ಕಾರ್ಯಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶ

18 ವರ್ಷದವರೆಗಿನ ಮಕ್ಕಳಿಗೆ ಮಾದಕ ವ್ಯಸನದ ಬಗ್ಗೆ ರಾಷ್ಟ್ರೀಯ ಮಾದಕ ವ್ಯಸನ ಕಾರ್ಯ ಯೋಜನೆ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: 18 ವರ್ಷದವರೆಗಿನ ಮಕ್ಕಳಿಗೆ ಮಾದಕ ವ್ಯಸನದ ಬಗ್ಗೆ ರಾಷ್ಟ್ರೀಯ ಮಾದಕ ಕಾರ್ಯ ಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಮಾದಕ ವ್ಯಸನ ಮತ್ತು ಅದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಲು ಶಾಲಾ ಪಠ್ಯಪುಸ್ತಕದಲ್ಲಿ ವಿವರಿಸುವಂತೆ ಕೂಡ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಮಕ್ಕಳಿಗೆ ಮಾದಕ ವಸ್ತುಗಳಿಂದುಂಟಾಗುವ ಹಾನಿಯ ಬಗ್ಗೆ ಅರಿವು ಉಂಟಾಗಬೇಕೆಂಬುದು ನ್ಯಾಯಾಲಯದ ಆದೇಶದ ಹಿಂದಿನ ಉದ್ದೇಶವಾಗಿದೆ.
ಮಕ್ಕಳಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಾಲ್ಕು ತಿಂಗಳೊಳಗೆ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಕೂಡ ಕೋರ್ಟ್ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com