ಭಾರತದ ಮೇಲೆ ಇಸಿಸ್ ಕಣ್ಣು; ವಿಧ್ವಂಸಕ ಕೃತ್ಯವೆಸಗಲು ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ

ಭಾರತದ ಮೇಲೆ ಇಸಿಸ್ ಉಗ್ರರು ಕೆಂಗಣ್ಣು ಬೀರಿದ್ದು, ಸರಣಿ ದಾಳಿ ನಡೆಸಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ...
ಇಸಿಸ್ ಉಗ್ರರು (ಸಂಗ್ರಹ ಚಿತ್ರ)
ಇಸಿಸ್ ಉಗ್ರರು (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ಮೇಲೆ ಇಸಿಸ್ ಉಗ್ರರು ಕೆಂಗಣ್ಣು ಬೀರಿದ್ದು, ಸರಣಿ ದಾಳಿ ನಡೆಸಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಸರಣಿ ದಾಳಿಗಳನ್ನು ನಡೆಸಲು ಉಗ್ರರು ಯೋಜನೆ ರೂಪಿಸಿದ್ದು, ಈಗಾಗಲೇ ಗಡಿನಿಯಂತ್ರಣ ರೇಖೆ ಬಳಿಯಿರುವ ಪಾಕಿಸ್ತಾನದ ಲಾಂಚ್ ಪ್ಯಾಡ್ ಗಳಲ್ಲಿ ಸಿದ್ಧರಾಗಿ ಕುಳಿತಿದಿದ್ದಾರೆಂದು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಭಾರತದ ಮೇಲೆ ದಾಳಿ ನಡೆಸುವ ಯೋಜನೆ ಕುರಿತಾಗಿ ಪಾಕಿಸ್ತಾನ ಉಗ್ರರು ತಮ್ಮ ನಿರ್ವಾಹಕರೊಂದಿಗೆ ಫೋನ್ ಗಳಲ್ಲಿ ಮಾತುಕತೆ ನಡೆಸುತ್ತಿದ್ದು, ಉಗ್ರರು ಫೋನ್ ನಲ್ಲಿ ನಡೆಸಿರುವ ಸಂಭಾಷಣೆಯನ್ನ ಭಾರತೀಯ ಗುಪ್ತಚರ ದಳ ಅಧಿಕಾರಿಗಳು ಕೇಳಿಸಿಕೊಂಡಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿಯಿರುವ ಪಾಕಿಸ್ತಾನದ ಲಾಂಚ್ ಪ್ಯಾಡ್ ಗಳಲ್ಲಿ ತಾಲಿಬಾನ್ ಉಗ್ರರು ಸಿದ್ಧರಾಗಿ ನಿಂತಿರುವುದು ಉಗ್ರರು ನಡೆಸಿರುವ ಸಂಭಾಷಣೆಯಲ್ಲಿ ತಿಳಿಸಿದುಬಂದಿದೆ. ಉಗ್ರರು ಪುಷ್ ತೋ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದು, ಈ ಸಂಭಾಷಣೆಯನ್ನು ಗುಪ್ತಚರ ದಳದ ಅಧಿಕಾರಿಗಳು ಕದ್ದಾಲಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಸರಣಿ ದಾಳಿ ನಡೆಸುವ ಸಲುವಾಗಿ ಇಸಿಸ್ ಹಾಗೂ ಆಫ್ಘಾನಿಸ್ತಾನ ಉಗ್ರರೊಂದಿಗೆ ಬಂದಿರುವ ತಾಲಿಬಾನ್ ಉಗ್ರರು, ಭಾರತದ ಗಡಿಯೊಳಗೆ ನುಸುಳಲು ಯೋಜನೆ ರೂಸಿದ್ದಾರೆಂದು ಹೇಳಲಾಗುತ್ತಿದೆ.

ದಾಳಿ ನಡೆಸುವ ಸಲುವಾಗಿ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಮತ್ತು ತೋರಾ ಬೋರಾ ಪರ್ವತ ಪ್ರದೇಶಗಳಲ್ಲಿ ತರಭೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಮೂಲಗಳು ತಿಳಿಸಿರುವ ಪ್ರಕಾರ ಪಾಕಿಸ್ತಾನದ ಇಸಿಸ್ ಉಗ್ರ ಸಂಘಟನೆಯಲ್ಲಿ ಮಾನವ ಶಕ್ತಿ ಕೊರತೆಯುಂಟಾಗಿದ್ದು, ಈ ಹಿನ್ನಲೆಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ತಾಲಿಬಾನ್ ಹಾಗೂ ಆಪ್ಘಾನಿಸ್ತಾನ ಉಗ್ರರನ್ನು ಕರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಿತ್ತು. ಸೀಮಿತ ದಾಳಿ ಬಳಿಕ ಉಗ್ರರಿಗೆ ಭಾರೀ ಹೊಡೆತ ಬಿದ್ದಿತ್ತು. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭಾರತ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಉಗ್ರರು ಸತತವಾಗಿ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com