ಉಕ್ಕಿನ ಸೇತುವೆ ಕಾಮಗಾರಿ ತಡೆಯಾಜ್ಞೆ ಜ.18ರವರೆಗೆ ವಿಸ್ತರಣೆ

ರಾಜ್ಯ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಜನವರಿ 18ರವರೆಗೆ...
ಉಕ್ಕಿನ ಸೇತುವೆ ಕಾಮಗಾರಿ ತಡೆಯಾಜ್ಞೆ ಜ.18ರವರೆಗೆ ವಿಸ್ತರಣೆ
ಉಕ್ಕಿನ ಸೇತುವೆ ಕಾಮಗಾರಿ ತಡೆಯಾಜ್ಞೆ ಜ.18ರವರೆಗೆ ವಿಸ್ತರಣೆ

ಚೆನ್ನೈ: ರಾಜ್ಯ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಜನವರಿ 18ರವರೆಗೆ ವಿಸ್ತರಿಸಿದೆ.

ಬಹುಕೋಟಿ ವೆಚ್ಚದ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಸ್ಥಗಿಗೊಂಡಿದೆ. ಆದರೆ, ಪ್ರಾಥಮಿಕ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ಬಿಡಿಎ ಕೋರಿದ್ದ ಅರ್ಜಿಯನ್ನು ಎನ್ ಜಿಟಿ ಪುರಸ್ಕರಿಸಿದೆ. ಇದರಿಂದ ಕಾಮಗಾರಿಯ ಪ್ರಾಥಮಿಕ ಹಂತಗಳಾಗ ಮಣ್ಣಿನ ಮಾದರಿ ಸಂಗ್ರಹ, ಪರಿವೀಕ್ಷಣೆ ಹಾಗೂ ಸರ್ವೆಯಂತಹ ಕಾರ್ಯಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಆದೇಶ ನೀಡಿದೆ.

ಈ ಹಿಂದೆ ನಾಗರಿಕರ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಎನ್ ಜಿಟಿ ರಾಜ್ಯ ಸರ್ಕಾರ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಡಿಎ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು.

ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಧಿಕರಣ ಪ್ರಾಥಮಿಕ ಕಾರ್ಯಗಳಿಗೆ ಅವಕಾಶ ನೀಡಿದೆ. ಆದರೆ, ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಿದೆ. ಉಕ್ಕಿನ ಸೇತುವೆ ಯೋಜನೆಗೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಮುಂದಿನ ವಿಚಾರಣಾ ದಿನವಾದ ಜನವರಿ 18ವರೆಗೆ ಮುಂದುವರೆಯಲಿದೆ ಎಂದು ನ್ಯಾಯಾಧೀಕರಣ ಸ್ಪಷವಾಗಿ ತಿಳಿಸಿದೆ.

ಈ ಹಿಂದೆ ರಾಜ್ಯ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಹಿನ್ನಲೆಯಲ್ಲಿ ಯೋಜನೆಯ ಪರ ಹಾಗೂ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಸಾಕಷ್ಟು ಅಭಿಯಾನಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಾಗರಿಕ ಕ್ರಿಯಾ ಸಮಿತಿ ಎನ್ ಜಿಟಿ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ ಸೇತುವೆ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com