ಮಣಿಪುರದಲ್ಲಿ ಆರ್ಥಿಕ ದಿಗ್ಬಂಧನ: ಸಮಸ್ಯೆ ಪರಿಹಾರಕ್ಕೆ ಮೋದಿಗೆ ಮೇರಿ ಕೋಮ್ ಪತ್ರ

ಹೊಸ ಜಿಲ್ಲೆ ರಚನೆಯ ರಾಜ್ಯ ಸರ್ಕಾರದ ತೀರ್ಮಾನದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಇದು ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದ್ದು ಕೂಡಲೇ...
ಮೇರಿ ಕೋಮ್
ಮೇರಿ ಕೋಮ್
Updated on: 

ನವದೆಹಲಿ: ಹೊಸ ಜಿಲ್ಲೆ ರಚನೆಯ ರಾಜ್ಯ ಸರ್ಕಾರದ ತೀರ್ಮಾನದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಇದು ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದ್ದು ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇರಿ ಕೋಮ್ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರದ ತೀರ್ಮಾನದಿಂದ ಸಂಘಟನೆಗಳು ಆರ್ಥಿಕ ದಿಗ್ಬಂಧನ ಹೇರಿವೆ. ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ಹಿಂಸಾಚಾರ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದು ಮೋದಿಗೆ ಕೋಮ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮಣಿಪುರದಲ್ಲಿ ಒಟ್ಟು 9 ಜಿಲ್ಲೆಗಳಿದ್ದವು. ಆದರೆ ಅಲ್ಲಿನ ರಾಜ್ಯ ಸರ್ಕಾರ ಇದೀಗ ಹೊಸದಾಗಿ 7 ಜಿಲ್ಲೆಗಳನ್ನು ರಚಿಸಿದೆ. ಆದರೆ ಇದಕ್ಕೆ ಅಲ್ಲಿನ ನಾಗಾ ಜನಾಂಗ ವಿರೋಧಿಸುತ್ತಿದ್ದು ಇದು ಹಿಂಸಾಚಾರಕ್ಕೆ ತಿರುಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com