

ನವದೆಹಲಿ: ಸಮಾಜದಲ್ಲಿ ಬದಲಾವಣೆಯನ್ನು ತರುತ್ತೇನೆ ಎಂದು ಮಾತು ಕೊಟ್ಟಿದ್ದೀರಿ ಆದರೆ, ನೀವು ನನಗೆ ಕೊಟ್ಟ ಯಾವ ಮಾತನ್ನು ನೆರವೇರಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ದೆಹಲಿ ಸಿಎಂ, ತಮ್ಮ ಶಿಷ್ಯ ಅರವಿಂದ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡಿರುವವರ ಪಟ್ಟಿಯನ್ನು ಜೂನ್ ನಿಂದ ವೆಬ್ ಸೈಟ್ ನಿಂದ ಅರವಿಂದ್ ಕೇಜ್ರಿವಾಲ್ ತೆಗೆದು ಹಾಕಿದ್ದಾರೆ. ಅನೇಕ ಕಾರ್ಯಕರ್ತರು ಈ ವಿಚಾರದ ಬಗ್ಗೆ ನನಗೆ ತಿಳಿಸಿ ಗಮನ ಹರಿಸುವಂತೆ ತಿಳಿಸಿದ್ದಾರೆ. ನೀವು ಪಕ್ಷಕ್ಕೆ ದೇಣಿಗೆ ಕೊಟ್ಟಿರುವವರ ಪಟ್ಟಿಯನ್ನು ವೆಬ್ ಸೈಟ್ ನಿಂದ ತೆಗೆದು ಹಾಕಿರುವ ಉದ್ದೇಶವೇನು, ನಿಮಗೂ ಬೇರೆ ಪಕ್ಷಗಳಿಗೂ ಏನು ವ್ಯತ್ಯಾಸ ಎಂದು ಅಣ್ಣಾ ಹಜಾರೆ ಪತ್ರದಲ್ಲಿ ಕಿಡಿಕಾರಿದ್ದಾರೆ.
ವ್ಯವಸ್ಥೆಯಲ್ಲೇನಾದರೂ ಬದಲಾವಣೆ ತರುವ ಅಪೇಕ್ಷೆ ಇರುವ ನಾಯಕತ್ವ ಅಂತಹ ವಿಚಾರದಲ್ಲಿ ಸಮಗ್ರ ಚರ್ಚೆ ನಡೆಸಬೇಕು ಎಂದು ಹೇಳಿರುವ ಅಣ್ಣಾ ಹಜಾರೆ ಅಧಿಕಾರ ಹಾಗೂ ಹಣದ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಿದಂತೆ ಕಿವಿಮಾತು ಹೇಳಿದ್ದಾರೆ.