ವಾರ್ಧಾ ಚಂಡಮಾರುತ: ಹಾನಿ ಪರಿಶೀಲಿಸಲು ತಮಿಳುನಾಡಿಗೆ ಕೇಂದ್ರದ ತಂಡ ಭೇಟಿ

ವಾರ್ಧಾ ಚಂಡಮಾರುತದಿಂದ ತತ್ತರಿಸಿ ಹೋಗಿದ್ದ ತಮಿಳುನಾಡು ರಾಜ್ಯಕ್ಕೆ ಕೇಂದ್ರದ ತಂಡ ಮಂಗಳವಾರ ಭೇಟಿ ನೀಡಲಿದ್ದು, ಚಂಡಮಾರುತದಿಂದ ಸಂಭವಿಸಿದ್ದ ನಷ್ಟವನ್ನು ಪರಿಶೀಲನೆ ನಡೆಸಲಿದೆ...
ವಾರ್ಧಾ ಚಂಡಮಾರುತ
ವಾರ್ಧಾ ಚಂಡಮಾರುತ

ಚೆನ್ನೈ: ವಾರ್ಧಾ ಚಂಡಮಾರುತದಿಂದ ತತ್ತರಿಸಿ ಹೋಗಿದ್ದ ತಮಿಳುನಾಡು ರಾಜ್ಯಕ್ಕೆ ಕೇಂದ್ರದ ತಂಡ ಮಂಗಳವಾರ ಭೇಟಿ ನೀಡಲಿದ್ದು, ಚಂಡಮಾರುತದಿಂದ ಸಂಭವಿಸಿದ್ದ ನಷ್ಟವನ್ನು ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.

ವಾರ್ಧಾ ಚಂಡಮಾರುತ ಅಬ್ಬರಿಸಿದ್ದ ಹಿನ್ನಲೆಯಲ್ಲಿ ತಮಿಳುನಾಡಿನ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ನಷ್ಟ ಎದುರಾಗಿತ್ತು. ಈ ಹಿನ್ನಲೆಯಲ್ಲಿ ನಷ್ಟ ಪರಿಶೀಲನೆ ನಡೆಸಲು ಆಂತರಿಕ ಸಚಿವಾಲಯ ತಂಡವೊಂದನ್ನು ರಚನೆ ಮಾಡಿತ್ತು.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರವೀಣ್ ವಷಿಷ್ಠ ನೇತೃತ್ವದ 9 ಸದಸ್ಯರ ತಂಡ ಇಂದು ಚೆನ್ನೈಗೆ ಭೇಟಿ ನೀಡುತ್ತಿದ್ದು, ಚಂಡಮಾರುತದಿಂದ ಸಂಭವಿಸಿದ ನಷ್ಟವನ್ನು ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ಕೇಂದ್ರ ನೇಮಿಸಿರುವ ತಂಡದಲ್ಲಿ ಆರ್ಥಿಕ ಇಲಾಖೆ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿದ್ದಾರೆಂದು ತಿಳಿದುಬಂದಿದೆ.

ಚೆನ್ನೈ, ಕಂಚೀಪುರಂ ಹಾಗೂ ತಿರುವೆಲ್ಲೂರ್ ಗೆ ತಂಡ ಭೇಟಿ ನೀಡುತ್ತಿದ್ದು, ಭೇಟಿಗೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನಪೀರ್ ಸೆಲ್ವಂ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com