ಉತ್ತರ ಪ್ರದೇಶದಲ್ಲಿ ಶಂಕಿತ ಉಗ್ರ ಮೌಲಾನಾ ಬಂಧನ, ಎನ್ಐಎ ವಶಕ್ಕೆ

ರಾಷ್ಟ್ರೀಯ ಭದ್ರತಾ ಪಡೆ(ಎನ್ಐಎ) ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ...
ಉಗ್ರ
ಉಗ್ರ

ನವದೆಹಲಿ: ರಾಷ್ಟ್ರೀಯ ಭದ್ರತಾ ಪಡೆ(ಎನ್ಐಎ) ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ ಅಬ್ದುಸ್ ಸಮಿ ಖಾಸ್ಮಿ ಶಂಕಿತ ಉಗ್ರನನ್ನು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬಂಧಿಸಿದ್ದು, ಎನ್ಐಎ ವಶಕ್ಕೆ ಪಡೆದಿದೆ.

ಮುಸ್ಲಿಂ ಯುವಕರಿಗೆ ದೇಶದ್ರೋಹ ಕೆಲಸ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಎಂಬ ಆರೋಪದ ಮೇಲೆ ಮೌಲಾನಾ ಮುಫ್ತಿ ಅಬ್ದುಲ್ ಸಮಿ ಖಾಸ್ಮಿಯನ್ನು ಬಂಧಿಸಲಾಗಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶವ್ಯಾಪಿ ಸ್ಫೋಟಗಳನ್ನು ನಡೆಸಲು ರೂಪಿಸುವ ಸಂಚು ರೂಪಿಸಿದ್ದ ಗುಂಪಿನಲ್ಲಿ ಈತನೂ ಒಬ್ಬ ಎಂಬುದು ಬಂಧಿತ 15 ಮಂದಿಯನ್ನು ಎನ್​ಐಎ ವಿಚಾರಣೆಗೆ ಗುರಿಪಡಿಸಿದಾಗ ಬೆಳಕಿಗೆ ಬಂದಿದೆ. ವಾಟ್ಸ್ ಆಪ್​ನಲ್ಲಿ ಗ್ರೂಪ್ ನಿರ್ಮಿಸಿ ನಿರಂತರವಾಗಿ ಈತ ಉಗ್ರವಾದ ಪಾಠ ಮಾಡುತ್ತಿದ್ದ ಎಂದು ರಾಷ್ಟ್ರೀಯ ಭದ್ರತಾ ಪಡೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com