ಶಾಮ್ಲಿ ಘಟನೆ: ಅಖಿಲೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ

ಚುನಾವಣಾ ಗೆಲುವಿನ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಬಾಲಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಅಖಿಲೇಖ್ ಯಾದವ್ ಅವರ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಕಿಡಿಕಾರಿದ್ದು, ಸಮಾಜವಾದಿ ಪಕ್ಷವನ್ನು ಗೂಂಡಾ ಪಕ್ಷವೆಂದು ಕರೆದಿದೆ...
ಶಾಮ್ಲಿ ಘಟನೆ: ಅಖಿಲೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ
ಶಾಮ್ಲಿ ಘಟನೆ: ಅಖಿಲೇಶ್ ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ

ನವದೆಹಲಿ: ಚುನಾವಣಾ ಗೆಲುವಿನ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಬಾಲಕ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಅಖಿಲೇಖ್ ಯಾದವ್ ಅವರ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಕಿಡಿಕಾರಿದ್ದು, ಸಮಾಜವಾದಿ ಪಕ್ಷವನ್ನು ಗೂಂಡಾ ಪಕ್ಷವೆಂದು ಕರೆದಿದೆ.

ರಾಜ್ಯದಲ್ಲಿ ಗೂಂಡಾಗಳು ಅಧಿಕಾರ ನಡೆಸಿದರೆ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಸಮಾಜವಾದಿ ಪಕ್ಷವೊಂದು ಗೂಂಡಾ ಪಕ್ಷ. ಹಾಗಾಗಿಯೇ ಅವರು ಗೆದ್ದಾದ ಗುಂಡುಗಳನ್ನು ಹಾರಿಸಿದ್ದಾರೆ. ಆದರೆ ಸಂಭ್ರಮದ ವೇಳೆ ಹಾರಿದ ಗುಂಡು ಬಾಲಕನ್ನು ಬಲಿತೆಗೆದುಕೊಂಡಿರುವುದು ನಿಜಕ್ಕೂ ದುರ್ಘಟನೆಯಾಗಿದೆ ಎಂದು ಹೇಳಿಕೊಂಡಿದೆ.

ಈ ಕುರಿತಂತೆ ಮಾತಾಡಿರುವ ಬಿಜೆಪಿ ನಾಯಕ ಸಿದ್ದಾರ್ಥ್ ನಾಥ್ ಸಿಂಗ್ ಅವರು, ಗುಂಡಾಗಳನ್ನು ನೋಡಿದಾಗ ಜಂಗಲ್ ರಾಜ್ ರಂತಹ ಫಲಿತಾಂಶ ಹೊರಬರುತ್ತದೆ. ಗೂಂಡಾಗಳ ಅಧಿಕಾರದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಇದು ನಿಜಕ್ಕೂ ದುರ್ಘಟನೆಯಾಗಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ನಡೆದ ಪಂಚಾಯತ್ ಚುನಾವಣೆಯೊಂದರಲ್ಲಿ ನಫೀಸಾ ಎಂಬುವವರು ಗೆಲವು ಸಾಧಿಸಿದ್ದರು. ಹೀಗಾಗಿ ಅಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷದ ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದರು. ಈ ವೇಳೆ ಕೈಯಲ್ಲಿದ್ದ ತಮ್ಮ ಬಂದೂಕುಗಳಿಂದ ಆಕಾಶದತ್ತ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದರು. ಆದರೆ ಸಂಭ್ರಮಾಚರಣೆ ವೇಳೆ ಹಾರಿದ ಗುಂಡೊಂದು 9ರ ಹರೆಯದ ಬಾಲಕನೊಬ್ಬನ ಎದೆಗೆ ಹಾರಿ ಆತನ ಪ್ರಾಣವನ್ನು ತೆಗೆದಿತ್ತು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com