ಉತ್ತರ ಪ್ರದೇಶ ಇಸ್ಲಾಮಿಕ್ ರಾಜ್ಯವಾಗಿ ಮಾರ್ಪಟ್ಟಿದೆ: ಶಿವಸೇನೆ

ಲಖನೌನಲ್ಲಿ ಪಾಕಿಸ್ತಾನ ಘಜಲ್ ವಾದಕ ಗುಲಾಂ ಅಲಿ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರದ...
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ
Updated on: 
ಮುಂಬೈ: ಲಖನೌನಲ್ಲಿ ಪಾಕಿಸ್ತಾನ ಘಜಲ್ ವಾದಕ ಗುಲಾಂ ಅಲಿ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡಿಸಿರುವ ಶಿವಸೇನೆ, ಉತ್ತರ ಪ್ರದೇಶ ಇಸ್ಲಾಮಿಕ್ ರಾಜ್ಯವಾಗಿ ಮಾರ್ಪಡುತ್ತಿದೆ ಮತ್ತು ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದೆ ಎಂದು ಸೋಮವಾರ ಆರೋಪಿಸಿದೆ.
ಪಾಕ್ ಗಾಯಕನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಖ ಪ್ರೇಕ್ಷಕನಾಗಿರುವ ಮಿತ್ರ ಪಕ್ಷ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಶಿವಸೇನೆ, ಕಾರ್ಯಕ್ರಮಕ್ಕೆ ಅವಕಾಶ ನೀಡಿದವರ ವಿರುದ್ಧ ದೇಶ ವಿರೋಧಿ ಕೃತ್ಯದಡಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದೆ.
ಹಿಂದೂ-ಮುಸ್ಲಿಂ ಒಗ್ಗಟ್ಟು ಪ್ರದರ್ಶಿಸಲು ಗುಲಾಂ ಅಲಿ ಅವರನ್ನು ಆಹ್ವಾನಿಸಲಾಗಿದೆ ಎಂದು 'ಇಸ್ಲಾಮಿಕ್ ಯಾದವ್' ಸರ್ಕಾರ ಹೇಳಿದೆ. ಆದರೆ ಅದಕ್ಕೆ ಪಾಕಿಸ್ತಾನಿ ಕಲಾವಿದರೆ ಬೇಕೆ? ದೇಶದಲ್ಲಿ ಅವರಿಗಿಂತ ಉತ್ತಮ ಮುಸ್ಲಿಂ ಗಾಯಕರಿಲ್ಲವೇ? ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ.
'ಮುಂಬರುವ ವಿಧಾಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮನವೊಲಿಕೆ ರಾಜಕೀಯಕ್ಕಾಗಿ ಯಾದವ್ ಸರ್ಕಾರ ದೇಶ ವಿರೋಧಿ ವ್ಯವಹಾರ ಮಾಡಲು ಆರಂಭಿಸಿದೆ' ಎಂದು ಸೇನೆ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com