ನವದೆಹಲಿ: ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಮೇಲೆ ಕೈ ಮಾಡಿದ್ದ ಬಾಲಿವುಡ್ ನಟ ಗೋವಿಂದ ಅವರು ಇದೀಗ ಆ ವ್ಯಕ್ತಿಗೆ ಪರಿಹಾರವಾಗಿ ರು. 5 ಲಕ್ಷಗಳನ್ನು ನೀಡುವುದಾಗಿ ಹೇಳಿದ್ದಾರೆ.
2008ರಲ್ಲಿ ಮನಿ ಹೈ ತೋ ಹನಿ ಹೈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅನುಮತಿ ಇಲ್ಲದೆ ಬಂದ ವ್ಯಕ್ತಿಯೊಬ್ಬ ಸೆಟ್ ನಲ್ಲಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಹೇಳಿ ಗೋವಿಂದ ಅವರು ಸಂತೋಷ್ ರೈ ಎಂಬ ವ್ಯಕ್ತಿ ಮೇಲೆ ಕೈ ಮಾಡಿದ್ದರು. ನಂತರ ಸಂತೋಷ್ ರೈ ನಟ ಗೋವಿಂದ ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಿಸಿ ವರ್ಷಗಳೇ ಕಳೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ನಟಿಸಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಿ ಸಂತೋಷ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದರಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಪ್ರಕರಣದ ವಿಚಾರಣೆ ನಡೆಸಿತ್ತು. ವಿಚಾರಣೆ ನಂತರ ಸಂತೋಷ್ ಬಳಿ ಕ್ಷಮೆಯಾಚಿಸುವಂತೆ ಹೇಳಿತ್ತು. ಅಲ್ಲದೆ, ಇದಕ್ಕೆ 2 ವಾರಗಳ ಕಾಲ ಸಮಯಾವಕಾಶವನ್ನು ನೀಡಿತ್ತು. ಇದೀಗ ಗೋವಿಂದ ಅವರು ಕೈಮಾಡಿದ್ದಕ್ಕೆ ರು.5 ಲಕ್ಷವನ್ನು ಪರಿಹಾರವಾಗಿ ನೀಡುವುದಾಗಿ ಹೇಳಿದ್ದಾರೆ.
Advertisement