
ನವದೆಹಲಿ: ಕಾರಿನಲ್ಲಿ ಬಂದ ಯುವತಿಯೊಬ್ಬಳು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಮೂರು ಗಂಟೆಗಳ ಕಾಲ ರಸ್ತೆಯಲ್ಲಿ ರಾದ್ಧಾಂತ ಮಾಡಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ಬುಧವಾರ ನಡೆದಿದೆ.
ಪಾನಮತ್ತಳಾಗಿದ್ದ ಯುವತಿ ಕಾರಿನಲ್ಲಿ ಬಂದಿದ್ದಾಳೆ. ಈ ವೇಳೆ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಗೇಟ್ ನಂಬರ್ ಸಿಕ್ಸ್ ಗೆ ಬರುತ್ತಿದ್ದಂತೆ ಬೈಕ್ ಸವಾರನೊಬ್ಬನಿಗೆ ಕಾರು ಡಿಕ್ಕಿ ಹೊಡೆದಿದೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀರು ಮಧ್ಯೆ ಪ್ರವೇಶಿಸಿದ್ದಾರೆ. ಈವೇಳೆ ರೊಚ್ಚಿಗೆದ್ದ ಯುವತಿ ಮೂರು ಗಂಟೆಗಳ ಕಾಲ ರಸ್ತೆಯಲ್ಲೇ ರಾದ್ಧಾಂತ ನಡೆಸಿದ್ದಾಳೆ. ಅಲ್ಲದೆ, ಯುವನ ಕತ್ತಿನ ಪಟ್ಟಿ ಹಿಡಿದು ಕಿರುಚಾಡಿದ್ದಾಳೆ.
ಸ್ಥಳೀಯರು ಹೇಳುವ ಪ್ರಕಾರ, ಗಲಾಟೆ ಮಾಡಿದ ಯುವಕ ಹಾಗೂ ಯುವತಿ ಇಬ್ಬರು ಪಾನಮತ್ತರಾಗಿದ್ದರು. ಹೀಗಾಗಿ ಇಬ್ಬರು ಜಗಳ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ಯುವಕ, ನನ್ನ ತಂದೆ ವೃತ್ತಿಯಲ್ಲಿ ಸಿಬಿಐ ಆಗಿದ್ದು, ಬಂಧನಕ್ಕೊಳಪಡಿಸಿದರೆ 10 ಸಾವಿರ ದಂಡವನ್ನು ಕಟ್ಟಿ ಹೊರ ಬರುತ್ತೇನೆ. ಈಗ ಪೊಲೀಸರು ಯುವತಿಯನ್ನು ಬಂಧಿಸಲಿ ಎಂದು ಹೇಳಿದ್ದಾನೆ.
Advertisement