ನಕಲಿ ಎನ್ ಕೌಂಟರ್: ತಮಿಳುನಾಡಿನ 12 ಪೊಲೀಸರ ವಿರುದ್ಧ ಕೊಲೆ ಕೇಸ್

ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ 12 ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ...
ಎನ್ ಕೌಂಟರ್ ಆದ ಕಿಟ್ಟಪ್ಪ
ಎನ್ ಕೌಂಟರ್ ಆದ ಕಿಟ್ಟಪ್ಪ
Updated on
ತಿರುನೆವೆಲ್ಲಿ: ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ 12 ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಎಂದು ಸಿಬಿ-ಸಿಐಡಿ ಅಧಿಕಾರಿಗಳಿಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಸೂಚಿಸಿದೆ. 
ಸೆಷನ್ ಕೋರ್ಟ್ ನ ನ್ಯಾಯಾಮೂರ್ತಿ ನಸೀರ್ ಅಹಮದ್ ಅವರು ಈ ಆದೇಶ ಹೊರಡಿಸಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಪೊಲೀಸರು ನಕಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಎಂದು ಸಿಬಿ-ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ಡಿಎಸ್ಪಿ ರಾಜಾರಾಮ್ ಸಹಾಯಕ ಕಮೀಷನರ್ ಮಾಧವನ್ ನಾಯರ್, ಎಸ್ಐ ಶಿವರಾಮಕೃಷ್ಣನ್, ಪೇದೆಗಳಾದ ಸಿಂಗಮ್ ಅಲಿಯಾಸ್ ಸೆಲ್ವನಾಥನ್, ಮುರುಗೇಶನ್, ಕರುಪ್ಪಸಾಮಿ, ಅಲ್ವಿನ್ ಬಾಬು ತಂಗಮ್, ಶಣ್ಮುಗವೇಲ್, ಕೃಷ್ಣನಾಸಾಮಿ, ಶರವಣ ಸುಂದರ್ ಮತ್ತು ಮುರುಗನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಎಂದು ನಿರ್ದೇಶಿಸಲಾಗಿದೆ.
ನ್ಯಾಯಾಲಯದ ಆದೇಶದ ಪ್ರತಿ ಇನ್ನು ನಮಗೆ ಬಂದಿಲ್ಲ. ಆದೇಶದ ಪ್ರತಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ 12 ಪೊಲೀಸರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 
ಆರ್ ಟಿಐ ಕಾರ್ಯಕರ್ತ ಬ್ರಮ್ಮ ಎಂಬುವವರು ಕಿಟ್ಟಪ್ಪ ಎಂಬ ವ್ಯಕ್ತಿಯನ್ನು 12 ಪೊಲೀಸರು ನಕಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ಬ್ರಮ್ಮ ಎಂಬುವವರು ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ತನಿಖೆ ಕೈಗೊಂಡಿದೆ. 2015 ಜೂನ್ 13ರಂದು ಕಿಟ್ಟಪ್ಪನನ್ನು ಎನ್ ಕೌಂಟರ್ ಮಾಡಲಾಗಿತ್ತು. ಆತನ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com