ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ದೇಶ ದ್ರೋಹಿ ಹೇಳಿಕೆ!

ದೆಹಲಿಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಭಾರತದ ವಿರುದ್ಧ ದೇಶ ದ್ರೋಹಿ ಹೇಳಿಕೆಗಳು ಕೇಳಿಬಂದಿದ್ದು, ಪ್ರೆಸ್ ಕ್ಲಬ್ ಗೆ ಬಂದ ಗುಂಪೊಂದು ಅಫ್ಜಲ್ ಗುರು ಅಮರೇ ರಹೇ...ಕಾಶ್ಮೀರಿ ಲೇಕರ್ ರಹೇಂಗೆ ಎಂದು ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಲಾಗುತ್ತಿದೆ...
ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ದೇಶ ದ್ರೋಹಿ ಹೇಳಿಕೆ!
ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ದೇಶ ದ್ರೋಹಿ ಹೇಳಿಕೆ!

ನವದೆಹಲಿ; ದೆಹಲಿಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಭಾರತದ ವಿರುದ್ಧ ದೇಶ ದ್ರೋಹಿ ಹೇಳಿಕೆಗಳು ಕೇಳಿಬಂದಿದ್ದು, ಪ್ರೆಸ್ ಕ್ಲಬ್ ಗೆ ಬಂದ ಗುಂಪೊಂದು ಅಫ್ಜಲ್ ಗುರು ಅಮರೇ ರಹೇ...ಕಾಶ್ಮೀರಿ ಲೇಕರ್ ರಹೇಂಗೆ ಎಂದು ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಲಾಗುತ್ತಿದೆ.

ಘಟನೆ ಬುಧವಾರ ನಡೆದಿದ್ದು, ದೆಹಲಿಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾಗೆ ಬಂದ ಗುಂಪೊಂದು ಕಾಶ್ಮೀರಿ ವಿಚಾರದ ಕುರಿತಂತೆ ಸಭೆಯೊಂದನ್ನು ಏರ್ಪಡಿಸಿದೆ. ಈ ವೇಳೆ ಕಾಶ್ಮೀರ ವಿಚಾರ ಮಾತನಾಡುತ್ತಿರುವಾಗ ಗುಂಪು ಇದ್ದಕ್ಕಿದ್ದಂತೆ ಅಫ್ಜಲ್ ಗುರು ಅಮರ್ ರಹೇ...( ಅಫ್ಜಲ್ ಗುರು ಎಂದಿಗೂ ಅಮರವಾಗಿರಲಿ) ಕಾಶ್ಮೀರಿ ಲೇಕರ್ ರೆಹೇಂಗೆ... (ಕಾಶ್ಮೀರವನ್ನು ತೆಗೆದುಕೊಂಡೇ ತೀರುತ್ತೇವೆ) ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, ಅಫ್ಜಲ್ ಗುರುವಿನ ಭಾವಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಭಾರತದ ವಿರುದ್ಧ 3 ಗಂಟೆಗಳ ಕಾಲ ಪ್ಲೆಸ್ ಕ್ಲಬ್ ನಲ್ಲಿ ದೇಶ ವಿರೋಧಿ ಹೇಳಿಕೆಗಳು ಕೇಳಿಬರುತ್ತಿದ್ದರೂ ಸಹ ಕ್ಲಬ್ ನ ಆಡಳಿತ ಮಂಡಳಿಗೆ ಮಾತ್ರ ಈ ಬಗ್ಗೆ ಗಮನಕ್ಕೆ ಬಂದಿಲ್ಲ.

ಪ್ಲೆಸ್ ಕ್ಲಬ್ ನಲ್ಲಿ ಸಭೆಯನ್ನು ಆಯೋಜಿಸಿದವರು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಜಾಫರ್ ಎಂದು ಹೇಳಲಾಗುತ್ತಿದೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ವಿವಿಯ ಪ್ರಾಧ್ಯಾಪಕ ಜಾಫರ್ ಅವರು, ಕಾಶ್ಮೀರಿ ವಿಚಾರ ಸಂಬಂಧ ನನ್ನ ಗೆಳೆಯ ಪ್ಲೆಸ್ ಕ್ಲಬ್ ನ ಹಾಲ್ ವೊಂದನ್ನು ಬುಕ್ ಮಾಡುವಂತೆ ಹೇಳಿದ್ದ. ಇದರಂತೆ ಹಾಲ್ ಬುಕ್ ಮಾಡಲಾಗಿತ್ತು. ನಂತರ ಪ್ರೆಸ್ ಕ್ಲಬ್ ನಲ್ಲಿ ಕಾಶ್ಮೀರ ವಿಚಾರ ಸಂಬಂಧ ಚರ್ಚೆ ಆರಂಭವಾಗಿತ್ತು. ಈ ವೇಳೆ ಗೆಳೆಯನ ಜೊತೆ ಬಂದಿದ್ದ ಗುಂಪು ಇದ್ದಕ್ಕಿದ್ದಂತೆ ಅಫ್ಜಲ್ ಗುರು ಬಗ್ಗೆ ಘೋಷಣೆಗಳನ್ನು ಕೂಗಿದ್ದರು. ನನಗೆ ಆಶ್ಚರ್ಯವಾಯಿತು. ಈ ಬಗ್ಗೆ ನನಗೇನು ತಿಳಿದಿರಲಿಲ್ಲ. ನನ್ನ ತಪ್ಪಿರುವುದನ್ನು ಒಪ್ಪಿಕೊಳ್ಳುತ್ತೇನೆ. ಘೋಷಣೆ ಕೂಗುವವರನ್ನು ತಡೆಯಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com