ಮುಂಬೈ: ಐಎಸ್ ಐನ ಮೇಜರ್ ಇಕ್ಬಾಲ್ ಉಗ್ರ ಡೇವಿಡ್ ಹೆಡ್ಲಿಗೆ ಭಾರತಕ್ಕೆ ಬರುವಾಗ 25,000 ಡಾಲರ್ ನೀಡಿದ್ದರು ಎಂದು ತಿಳಿದು ಬಂದಿದೆ.
2006 ಸೆಪ್ಟೆಂಬರ್ ನಲ್ಲಿ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ವೇಳೆ ಇಕ್ಬಾಲ್ 25 ಸಾವಿರ ಡಾಲರ್ ನೀಡಿದ್ದರು ಎಂದು ವರದಿಯಾಗಿದೆ.
ನಾನು ಉಗ್ರ ಸಂಘಟನೆ ಸೂಚನೆ ಮೇರೆಗೆ ಮಾಹಿತಿ ಕಲೆ ಹಾಕಲು ಭಾರತಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಲಷ್ಕರ ಉಗ್ರ ತಹವೂರ್ ಹುಸೇನ್ ರಾಣಾ ತಿಳಿದಿತ್ತು ಎಂದು ಹೇಡ್ಲಿ ಹೇಳಿದ್ದಾನೆ.
26/11 ದಾಳಿಗೂ ಮುನ್ನ ತಹವೂರ್ ಹುಸೇನ್ ರಾಣಾ ಮುಂಬೈಗೆ ಭೇಟಿ ನೀಡಿದ್ದನು. ಅಲ್ಲದೇ, ನನಗೆ ಕೂಡಲೇ ಭಾರತ ಬಿಟ್ಟು ಬರುವಂತೆ ಸಲಹೆ ನೀಡಿದ್ದನು ಎಂದು ಹೇಡ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ಹೇಳಿದ್ದಾನೆ.